ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಜಾಮೀನು ಮಂಜೂರು ಆಗಿದ್ದು, ಪರಪ್ಪನ ಅಗ್ರಹಾರ ದಿಂದ ಇಂದು ಬಿಡುಗಡೆ ಆಗಿದ್ದಾರೆ.
ಜೂನ್ 11 ರಂದು ಬಂಧನಕ್ಕೊಳಗಾಗಿದ್ದ ಪವಿತ್ರಾಗೌಡ ಜೂನ್ 20 ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿನ್ನೆ ಅವರು ರಿಲೀಸ್ ಆಗಬೇಕಿತ್ತು. ಆದರೆ ಜಾಮೀನು ಪ್ರತಿ ತಡವಾಗಿ ಜೈಲಿಗೆ ತಲುಪಿದ ಹಿನ್ನೆಲೆ ನಿನ್ನೆ ಪವಿತ್ರಾಗೌಡ ರಿಲೀಸ್ ಆಗಿರಲಿಲ್ಲ, . ಜೈಲಿನ ನಿಯಮಾವಳಿ ಪ್ರಕಾರ ಜಾಮೀನು ಪ್ರತಿ ತಲುಪಿಸಲು ಸಂಜೆ 6 ಗಂಟೆ ಡೆಡ್ ಲೈನ್ ಆಗಿತ್ತು. ಇದೀಗ ಕೊನೆಗೂ ಪವಿತ್ರಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು ಆಗಿದೆ. ನಟ ದರ್ಶನ್ ಸೇರಿ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ನಟ ದರ್ಶನ್, ಪವಿತ್ರಾಗೌಡ, ನಾಗರಾಜು, ಅನುಕುಮಾರ್, ಜಗದೀಶ್, ಲಕ್ಷ್ಮಣ್, ಪ್ರದೋಶ್ ರಾವ್ ಸೇರಿದಂತೆ 7 ಆರೋಪಿಗಳಿಗೂ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.