alex Certify ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾಕಿಸ್ತಾನಿ ಬೌಲರ್ ಮೊಹಮ್ಮದ್ ಅಮೀರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾಕಿಸ್ತಾನಿ ಬೌಲರ್ ಮೊಹಮ್ಮದ್ ಅಮೀರ್

ಪಾಕಿಸ್ತಾನ ತಂಡದ ಅನುಭವಿ ಎಡಗೈ ವೇಗಿ ಮಹಮದ್ ಅಮೀರ್, ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.  ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ನಡುವಣ ನಡೆದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, ಮೊಹಮ್ಮದ್ ಅಮೀರ್ ಇದೀಗ ತಮ್ಮ ಕ್ರಿಕೆಟ್ ಪಯಣಕ್ಕೆ  ವಿದಾಯ ಹೇಳುತ್ತಿದ್ದು, ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ತಿಳಿಸಿದ್ದು, ಸೂಕ್ಷ್ಮವಾಗಿ ಪರಿಗಣಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2009ರಲ್ಲಿ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯ ಮೂಲಕ  ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಮೊಹಮ್ಮದ್ ಅಮೀರ್ ಬಳಿಕ ಏಕದಿನ ಪಂದ್ಯಗಳಲ್ಲಿ ಮಿಂಚಿದರು. ಏಕದಿನ ಕ್ರಿಕೆಟ್ ನಲ್ಲಿ 61  ಪಂದ್ಯಗಳನ್ನಾಡಿದ್ದು,  81 ವಿಕೆಟ್ ಪಡೆದುಕೊಂಡರೆ, ಟಿ ಟ್ವೆಂಟಿ ಕ್ರಿಕೆಟ್ನಲ್ಲೂ 62 ಪಂದ್ಯಗಳಲ್ಲಿ 71 ವಿಕೆಟ್  ಕಬಳಿಸಿದ್ದಾರೆ.

— Mohammad Amir (@iamamirofficial) December 14, 2024

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...