HomeKarnatakaನಟೋರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಅರೆಸ್ಟ್

ನಟೋರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಅರೆಸ್ಟ್

ಹುಬ್ಬಳ್ಳಿ: ನಟೊರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಅಮಿತ್ ನಾಯಕ್ ಗೋವಾ ಪೊಲೀಸ್ ಕ್ರೈಂ ಬ್ರ್ಯಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 12 ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಕ್ರಿನಲ್ ಸುಲೇಮಾನ್ ಸಿದ್ದಿಕಿಯನ್ನು ಕಾವಲು ಕಾಯಲೆಂದು ಅಮಿತ್ ನಾಯಕ್ ಅವರನ್ನು ನೇಮಿಸಲಾಗಿತ್ತು.

ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ಕೊಲೆ, ಕೊಲೆ ಯತ್ನ, ವಂಚನೆ, ಭೂಮಾಫಿಯಾ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಸುಲೇಮಾನ್ ನನ್ನು ಬಂಧಿಸಿದ್ದರು. ನಟೋರಿಯಸ್ ಕ್ರಿಮಿನಲ್ ಕಾವಲಿಗಾಗಿ ಅಮಿತ್ ನಾಯಕ್ ಅವರನ್ನು ನೇಮಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಿತ್ ನಾಯಕ್, ಸುಲೇಮಾನ್ ಸಿದ್ದಿಕಿಯನ್ನು ಡಿ.13ರಂದು ಕಸ್ಟಡಿಯಿಂದ ಬಿಟ್ಟಿದ್ದಲ್ಲದೇ ಆತನೊಂದಿಗೆ ತಾನೂ ಪರಾರಿಯಾಗಿದ್ದ. ಗೋವಾದಿಂದ ಎಸ್ಕೇಪ್ ಆಗಿದ್ದ ಅಮಿತ್ ನಾಯಕ್, ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಹಳೇ ಹುಬ್ಬಳ್ಳಿ ಪೊಲೀಸರು ಅಮಿತ್ ನಾಯಕ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular