ನವದೆಹಲಿ: ದೆಹಲಿಯ ನಾಲ್ಕು ಶಾಲೆಗಳಿಗೆ ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆಗಳು ಇಮೇಲ್ ಬಂದಿದ್ದು, ಶೋಧ ಕಾರ್ಯ ನಡೆಸಲಾಗಿದೆ.
ಡಿಸೆಂಬರ್ 9 ರಂದು ಕನಿಷ್ಠ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿದ್ದು, ನಂತರ ಪೊಲೀಸರು ಇದನ್ನು ಹುಸಿ ಎಂದು ಪರಿಗಣಿಸಿದ್ದಾರೆ. ಈ ಬೆನ್ನಲ್ಲೇ ಇಂದು ದೆಹಲಿಯ ನಾಲ್ಕು ಶಾಲೆಗಳಿಗೆ ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆಗಳು ಇಮೇಲ್ ಬಂದಿದೆ.
ಪಶ್ಚಿಮ ವಿಹಾರ್ನ ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್ (ಮುಂಜಾನೆ 4:21), ಶ್ರೀ ನಿವಾಸ್ ಪುರಿಯ ಕೇಂಬ್ರಿಡ್ಜ್ ಶಾಲೆ (ಬೆಳಿಗ್ಗೆ 6:23), ಕೈಲಾಶ್ನ ಪೂರ್ವದಲ್ಲಿರುವ ಡಿಪಿಎಸ್ ಅಮರ್ ಕಾಲೋನಿ (ಬೆಳಿಗ್ಗೆ 6:35) ಮತ್ತು ಇತರ ಒಂದು ಶಾಲೆಯಿಂದ ಬೆದರಿಕೆ ಇಮೇಲ್ಗಳಿಗೆ ಸಂಬಂಧಿಸಿದ ಕರೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿಶಾಮಕ ಇಲಾಖೆ, ಪೊಲೀಸ್, ಬಾಂಬ್ ಪತ್ತೆ ತಂಡಗಳು ಮತ್ತು ಶ್ವಾನದಳಗಳು ಶಾಲೆಗಳಿಗೆ ಆಗಮಿಸಿ ತಪಾಸಣೆ ನಡೆಸುತ್ತಿವೆ.ಶಾಲೆಗಳಲ್ಲಿ ತಪಾಸಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.