ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಬೆಳ್ಳುಳ್ಳಿ ದರ ಕೆಜಿಗೆ 500 ರೂ.ವರೆಗೆ ತಲುಪಿದೆ. ನುಗ್ಗೆಕಾಯಿ ದರ ಕೂಡ ದಾಖಲೆಯ 500 ರೂಪಾಯಿ ಗಡಿ ದಾಟಿದ್ದು, ಒಂದು ನುಗ್ಗೆಕಾಯಿಗೆ 50 ರೂಪಾಯಿವರೆಗೂ ದರ ಬಂದಂತಾಗಿದೆ.
ಈರುಳ್ಳಿ ಬೆಲೆ ಕೆಜಿಗೆ 70 ರಿಂದ 80ರೂ. ವರೆಗೆ ತಲುಪಿದ್ದು, ಟೊಮೆಟೊ 50-60 ರೂ., ಬೀನ್ಸ್ 75-80 ರೂ., ಸುವರ್ಣಗೆಡ್ಡೆ 65-70 ರೂ. ದರ ಇದೆ. ಬೀಟ್ರೂಟ್, ಹೀರೇಕಾಯಿ, ಹಸಿಮೆಣಸು, ಬದನೆಕಾಯಿ ಸೇರಿದಂತೆ ಉಳಿದ ತರಕಾರಿ, ಸೊಪ್ಪು ಬೆಲೆ ಕೂಡ ಭಾರಿ ಏರಿಕೆ ಆಗಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ನುಗ್ಗೆಕಾಯಿ 450 -500 ರೂ., ಬೆಳ್ಳುಳ್ಳಿ 450- 500 ರೂ.ವರೆಗೂ ದರ ಇದೆ. ಕೆಲವು ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಖರೀದಿ ಪ್ರಮಾಣ ಕಡಿಮೆಯಾಗಿದೆ.