alex Certify ಶಬರಿಮಲೆಗೆ ಬರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಗೆ ಬರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವವರಿಗೆ ದೇವರ ಸುಲಭ ದರ್ಶನಕ್ಕೆ ಅನುಕೂಲವಾಗುವಂತೆ ವಿಶೇಷ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ.

“ಶಬರಿಮಲೆ – ಪೊಲೀಸ್ ಮಾರ್ಗದರ್ಶಿ” ಎಂಬ ಈ ಪೋರ್ಟಲ್ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುತ್ತದೆ. ಭಕ್ತರಿಗೆ ಉಪಯುಕ್ತವಾದ ಎಲ್ಲಾ ಪ್ರಮುಖ ಮಾಹಿತಿಯನ್ನು ಪೋರ್ಟಲ್ ಒಳಗೊಂಡಿದೆ.

ಪೊಲೀಸ್ ಸಹಾಯವಾಣಿ ಸಂಖ್ಯೆಗಳು, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳು, ಆರೋಗ್ಯ ಸೇವೆಗಳು, ಕೆಎಸ್ಆರ್ಟಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ಠಾಣೆ ಸೇವೆಗಳು ಮತ್ತು ಆಹಾರ ಸುರಕ್ಷತಾ ಮಾಹಿತಿಗಳು ಈ ಪೋರ್ಟಲ್ನಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ಶಬರಿಮಲೆಯ ಇತಿಹಾಸ, ವಾಹನಗಳ ನಿಲುಗಡೆ ಮತ್ತು ಪ್ರತಿ ಜಿಲ್ಲೆಯಿಂದ ಶಬರಿಮಲೆಗೆ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...