HomeInternationalಮದ್ಯ ನೀಡಲು ನಿರಾಕರಣೆ; ಉದ್ಯೋಗಿಗಳ ಮೇಲೆ ಕಾರು ಹರಿಸಲೆತ್ನಿಸಿದ ಯುವತಿ | Watch Video

ಮದ್ಯ ನೀಡಲು ನಿರಾಕರಣೆ; ಉದ್ಯೋಗಿಗಳ ಮೇಲೆ ಕಾರು ಹರಿಸಲೆತ್ನಿಸಿದ ಯುವತಿ | Watch Video

ಬ್ರೆಜಿಲ್‌ನ ಟೊಕಾಂಟಿನ್ಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 21 ವರ್ಷದ ಯುವತಿಯೊಬ್ಬರಿಗೆ ಮದ್ಯ ನೀಡಲು ನಿರಾಕರಿಸಿದ ನಂತರ ಆಕೆ ತನ್ನ ಕಾರನ್ನು ಮದ್ಯದಂಗಡಿಗೆ ಡಿಕ್ಕಿ ಹೊಡೆದು ಇಬ್ಬರು ಉದ್ಯೋಗಿಗಳನ್ನು ಗಾಯಗೊಳಿಸಿದ್ದಾರೆ.

ಆಕೆ ಈ ಹಿಂದೆ ಅವ್ಯವಸ್ಥೆಯನ್ನು ಉಂಟುಮಾಡಿದ ಕಾರಣಕ್ಕೆ ಉದ್ಯೋಗಿಗಳು ಮದ್ಯ ನೀಡಲು ನಿರಾಕರಿಸಿದ್ದು, ಇದೀಗ ಉದ್ಯೋಗಿಗಳ ಮೇಲೆ ಕಾರು ಹರಿಸಲು ಯತ್ನಿಸಿದ್ದಕ್ಕೆ ಕೊಲೆ ಪ್ರಕರಣ ಎದುರಿಸುವಂತಾಗಿದೆ.

21 ವರ್ಷದ ಸಾಮಿಯಾ ಸಾ ತನ್ನ ಕಾರನ್ನು ಮದ್ಯದಂಗಡಿಗೆ ನುಗ್ಗಿಸಿದಾಗ ಈ ಘಟನೆ ಸಂಭವಿಸಿದೆ. ಆಕೆಗೆ ಮದ್ಯ ನೀಡಲು ನಿರಾಕರಿಸಿದ ನಂತರ ತನ್ನ ತಾಳ್ಮೆ ಕಳೆದುಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರು ನುಗ್ಗಿಸುವ ಮೊದಲು ಸಾ ಒಬ್ಬ ವ್ಯಕ್ತಿಗೆ ಮತ್ತು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು, ಇಬ್ಬರು ಕೆಲಸಗಾರರನ್ನು ಗಾಯಗೊಳಿಸಿ ಕ್ಯಾಷಿಯರ್ ಕೌಂಟರ್‌ಗಳನ್ನು ನಾಶಪಡಿಸಿದ್ದಾಳೆ ಎನ್ನಲಾಗಿದೆ.

 

 

For Latest News Updates, Join Our Whatsapp Community🚩
RELATED ARTICLES

Most Popular