ಹಾಸನ : ಕಾಂಗ್ರೆಸ್ ಸಮಾವೇಶದಲ್ಲಿ ಕಾಲಿಗೆ ಕೇಬಲ್ ಸಿಲುಕಿ ಸಿಎಂ ಸಿದ್ದರಾಮಯ್ಯ ಮುಗ್ಗರಿಸಿದ ಘಟನೆ ನಡೆಸಿದೆ.
ವೇದಿಕೆ ಮೇಲೆ ಬಂದು ಅಭಿಮಾನಿಗಳತ್ತ ಕೈ ಬೀಸುವಾಗ ಸಿದ್ದರಾಮಯ್ಯ ಕಾಲಿಗೆ ಕೇಬಲ್ ಸಿಲುಕಿ ಮುಗ್ಗರಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಅಲ್ಲಿದ್ದವರು ಅವರನ್ನು ಹಿಡಿದುಕೊಂಡಿದ್ದಾರೆ. ಅರಸೀಕೆರೆ ರಸ್ತೆಯ ಎಸ್ ಎಂ ಕೃಷ್ಣ ನಗರದಲ್ಲಿ ಸಮಾವೇಶ ನಡೆಯುತ್ತಿದ್ದು, ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಹಾಸನದಲ್ಲಿ ಇಂದು ಆಯೋಜಿಸಲಾದ ಜನಕಲ್ಯಾಣ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು, ಶಾಸಕರು ಹಾಜರಿದ್ದಾರೆ. ಸಮಾವೇಶದ ಹಿನ್ನೆಲೆ ನಗರದ ಎಲ್ಲಾ ಕಡೆ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಸಿಎಂ ಅಭಿಮಾನಿಗಳು ಸಿದ್ದರಾಮಯ್ಯರ ಫೋಟೋ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದಾರೆ.