ಬೆಂಗಳೂರು : ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ- 2 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ.
ಪುಷ್ಪ- 2 ಚಿತ್ರದ ಟಿಕೆಟ್ ದುಬಾರಿಯಾದರೂ ಎಲ್ಲಾ ಕಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲು ಅರ್ಜುನ್ ಗತ್ತು-ಗೈರತ್ತಿಗೆ ಫ್ಯಾನ್ಸ್ ಫಿದಾ ಆಗಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲೇ ಪುಷ್ಪ-2 ರಿಲೀಸ್ ಆಗಿದ್ದು, ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಅಲ್ಲು ಅರ್ಜುನ್ ಅಭಿನಯ ಚೆನ್ನಾಗಿದೆ. ಸಿನಿಮಾದ ಕಥೆಯನ್ನು ನಿರ್ದೇಶಕರು ಅಧ್ಬುತವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ 100 ಡೇಸ್ ಪಕ್ಕಾ ಎಂದು ಸಿನಿಮಾ ನೋಡಿದ ಅಭಿಮಾನಿಗಳು ಹೇಳಿದ್ದಾರೆ. ಹಲವು ಕಡೆ ಮಿಡ್ ನೈಟ್ ಶೋ, ಮಾರ್ನಿಂಗ್ ಶೋನಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸಿದ್ದಾರೆ.ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶಕ ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
అభిమానులతో కలిసి సంధ్య థియేటర్లో పుష్ప 2 ప్రీమియర్ షో చూసేందుకు వచ్చిన అల్లు అర్జున్#Pushpa2ThaRule #PushpaTheRule #Pushpa2 #AlluArjun𓃵 #sandhya35mm pic.twitter.com/8qaCboYWt8
— Arun Nakka (@Arunnakka0) December 4, 2024