HomeIndiaಸಂಸತ್'ನಲ್ಲಿ ಸಂಸದೆ ‘ಪ್ರಿಯಾಂಕಾ ಗಾಂಧಿ’ ಫೋಟೋ ಕ್ಲಿಕ್ಕಿಸಿದ ರಾಹುಲ್ ಗಾಂಧಿ : ವಿಡಿಯೋ ವೈರಲ್.!

ಸಂಸತ್’ನಲ್ಲಿ ಸಂಸದೆ ‘ಪ್ರಿಯಾಂಕಾ ಗಾಂಧಿ’ ಫೋಟೋ ಕ್ಲಿಕ್ಕಿಸಿದ ರಾಹುಲ್ ಗಾಂಧಿ : ವಿಡಿಯೋ ವೈರಲ್.!

ನವದೆಹಲಿ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ನಾಯಕಿ ‘ಪ್ರಿಯಾಂಕಾ ಗಾಂಧಿ ವಾದ್ರಾ’ ಗುರುವಾರ ಲೋಕಸಭಾ ಸದಸ್ಯರಾಗಿ (ಎಂಪಿ) ಪ್ರಮಾಣ ವಚನ ಸ್ವೀಕರಿಸಿದರು.

ಇದಕ್ಕೂ ಮುನ್ನ ಅವರು ಬೆಳಿಗ್ಗೆ ಸಂಸತ್ತಿಗೆ ಆಗಮಿಸಿದಾಗ, ಅವರ ಸಹೋದರ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ತಡೆದು ಫೋಟೋ ಕ್ಲಿಕ್ಕಿಸಿದರು. ಪ್ರಿಯಾಂಕಾ ಗಾಂಧಿ ಸೀರೆಯಲ್ಲಿ ಸಖತ್ ಮಿಂಚುತ್ತಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ರಾಹುಲ್ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಹೋಗುವ ಮೊದಲು ಪ್ರಿಯಾಂಕಾ ಅವರನ್ನು ತಡೆದು ಅವರ ಚಿತ್ರವನ್ನು ಕ್ಲಿಕ್ ಮಾಡುತ್ತಿರುವುದನ್ನು ಕಾಣಬಹುದು.ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರಿಯಾಂಕಾ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಮಕ್ಕಳು ಸಹ ಸಂಸತ್ತಿಗೆ ಆಗಮಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular