HomeKarnatakaSHOCKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಪ್ರೇಯಸಿ ಕೊಂದು 2 ದಿನ ಶವದ...

SHOCKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಪ್ರೇಯಸಿ ಕೊಂದು 2 ದಿನ ಶವದ ಜೊತೆ ಕಾಲ ಕಳೆದ ಪ್ರಿಯತಮ.!

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಯುವಕನೋರ್ವ ತನ್ನ ಪ್ರೇಯಸಿಯನ್ನು ಕೊಂದು 2 ದಿನ ಶವದ ಜೊತೆ ಕಾಲ ಕಳೆದಿದ್ದಾನೆ.

ಹೌದು. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದಿರಾನಗರ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.ಕೊಲೆಯಾದ ಯುವತಿಯನ್ನು ಅಸ್ಸಾಂ ಮೂಲಕ ಮಾಯಾ ಗೊಗಾಯ್ ಎಂದು ಗುರುತಿಸಲಾಗಿದೆ.ಆರವ್ ಹಾರ್ನಿ ಎಂಬಾತಈ ಕೃತ್ಯ ಎಸಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹೆಚ್ ಎಸ್ ಆರ್ ಲೇಔಟ್ ನಲ್ಲಿ ವಾಸವಿದ್ದ ಮಾಯಾ ಪ್ರಿಯಕರನಿದ್ದ ಹೋಟೆಲ್ ರೂಮ್’ಗೆ ಬಂದಿದ್ದಳು . ಈ ವೇಳೆ ಆತ ಕೊಲೆ ಮಾಡಿ ಪರಾರಿಯಾಗಿದ್ದಾನೆ . ಘಟನೆ ನಡೆದ ಸ್ಥಳಕ್ಕೆ ಇಂದಿರಾನಗರದ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರೇಯಸಿಯ ಮೃತದೇಹವನ್ನು ಪೀಸ್ ಪೀಸ್ ಮಾಡಲು ಈತ ಪ್ಲ್ಯಾನ್ ಮಾಡಿದ್ದನಾ ಎಂಬ ಅನುಮಾನ ಪೊಲೀಸರಿಗೆ ಕಾಡಿದೆ. ಯಾಕಂದ್ರೆ ಶವದ ಜೊತೆ ಈತ 2 ದಿನ ಕಾಲ ಕಳೆದಿದ್ದು, ನಂತರ ಪ್ಲ್ಯಾನ್ ಫೇಲ್ ಆಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular