ಬೆಂಗಳೂರು : ಖಾಸಗಿ ಫೋಟೋ ಕಳುಹಿಸಿ ಸರ್ಕಾರಿ ನೌಕರನಿಗೆ ಹನಿಟ್ರ್ಯಾಪ್ ಮಾಡಿದ ನಾಲ್ವರನ್ನು ಸಿಸಿಬಿ ಬಂಧಿಸಿದೆ.
ಕೇಂದ್ರ ಸರ್ಕಾರದ ಸಂಸ್ಥೆಯೊಂದರ ನೌಕರನಿಗೆ ಖಾಸಗಿ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ 2.5 ಕೋಟಿ ಹಣ ದೋಚಿದ್ದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ.
ವಂಚನೆಗೊಳಗಾದ ವ್ಯಕ್ತಿಯನ್ನು ತಬ್ಸಂ ಬೇಗಂ ಜಿಮ್ ಒಂದರಲ್ಲಿ ಪರಿಚಯ ಮಾಡಿಕೊಂಡಿದ್ದಳು. ನಂತರ ವ್ಯಕ್ತಿಯ ಜೊತೆ ಸ್ನೇಹ ಬೆಳೆಸಿ ಹನಿಟ್ರ್ಯಾಪ್ ಅಡ್ಡಾಗೆ ಬೀಳಿಸಿಕೊಳ್ಳಲಾಗಿತ್ತು. 3 ವರ್ಷಗಳ ನಂತರ ಸಂತ್ರಸ್ತ ಸಿಸಿಬಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.