ಕೇರಳದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಐಸ್ ಕ್ರೀಂ ಮಾರಾಟಗಾರನೊಬ್ಬ ಅದನ್ನು ಪ್ಯಾಕಿಂಗ್ ಮಾಡುವ ಮೊದಲು ಅದರ ರುಚಿ ನೋಡಿದ್ದು, ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಡುವಳ್ಳಿ ಸಮೀಪದ ಕಿಝಕ್ಕೋತು ಪಂಚಾಯತ್ ವ್ಯಾಪ್ತಿಯ ಎಲೆಟ್ಟಿಲ್ ವಟ್ಟೋಲಿಯಲ್ಲಿರುವ ” ಐಸ್ ಮಿ” ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ವೈರಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಕೋಝಿಕ್ಕೋಡ್ ಅಧಿಕಾರಿಗಳು ಅಂಗಡಿ ವಿರುದ್ಧ ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ.
ಕುನ್ನಮಂಗಲಂನ ಚೂಲಂ ವಯಲ್ನಲ್ಲಿರುವ ಅಂಬಲಪರಂಬಿಲ್ನ ಐಸ್ ಕ್ರೀಂ ತಯಾರಕ ರಶೀದ್, ಪ್ರತಿ ಪಾಪ್ಸಿಕಲ್ ಅನ್ನು ಪ್ಯಾಕ್ ಮಾಡುವ ಮೊದಲು ರುಚಿ ನೋಡುತ್ತಿರುವುದನ್ನು ಸಾರ್ವಜನಿಕರೊಬ್ಬರು ಸೆರೆಹಿಡಿದಿರುವ ವೀಡಿಯೊ ತೋರಿಸಿದೆ.
ಈ ಬಗ್ಗೆ ಎಚ್ಚೆತ್ತ ಕೋಡುವಳ್ಳಿ ಪೊಲೀಸರು, ಅಂಗಡಿಗೆ ಬೀಗ ಜಡಿದು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಅನೀಸ್ ರೆಹಮಾನ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಪಿ.ಎಂ. ವಿನೋದ್ ಅಂಗಡಿ ಪರಿಶೀಲನೆ ನಡೆಸಿ ಕೋಝಿಕ್ಕೋಡ್ನ ಮಲಪ್ಪರಂಬದಲ್ಲಿರುವ ಪ್ರಾದೇಶಿಕ ವಿಶ್ಲೇಷಣಾತ್ಮಕ ಪ್ರಯೋಗಾಲಯದಲ್ಲಿ ಪರೀಕ್ಷೆಗಾಗಿ ಐಸ್ ನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
“ಅಂಗಡಿಯ ನೋಂದಣಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಮುಂದಿನ ಕ್ರಮಕ್ಕಾಗಿ ಸಹಾಯಕ ಆಹಾರ ಸುರಕ್ಷತಾ ಆಯುಕ್ತರಿಗೆ ವರದಿಯನ್ನು ಸಲ್ಲಿಸಲಾಗಿದೆ ” ಎಂದು ರೆಹಮಾನ್ ಹೇಳಿದ್ದಾರೆ. ಅಂಗಡಿಯ ಮಾಲೀಕ ಪಾಪ್ಸಿಕಲ್ಗಳು ಮಾರಾಟಕ್ಕಿಲ್ಲ, ಆದರೆ ಕುಟುಂಬದ ವೈಯಕ್ತಿಕ ಬಳಕೆಗಾಗಿ ಎಂದು ಸಮಜಾಯಿಷಿ ನೀಡಿದ್ದಾರೆ.
ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ವಿನೋದ್, ಐಸ್ ತಯಾರಿಕೆ ಘಟಕ ಮತ್ತು ಅದರ ಚಿಲ್ಲರೆ ಮಾರಾಟ ಮಳಿಗೆಗಳು ಹಲವು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಿದ್ದು, ಯಾವ ಕಾರಣಕ್ಕೆ ಮಾರಾಟಗಾರ ಈ ರೀತಿ ಮಾಡಿದ್ದಾನೆ ಎಂಬುದರ ತನಿಖೆ ಆರಂಭಿಸಿದ್ದಾರೆ.
ಅಂಗಡಿ ಮತ್ತು ಅದರ ನಿರ್ವಾಹಕರ ವಿರುದ್ಧ ಮುಂದಿನ ಕ್ರಮವನ್ನು ನಿರ್ಧರಿಸಲು ಅಧಿಕಾರಿಗಳು ಪ್ರಯೋಗಾಲಯದ ವಿಶ್ಲೇಷಣೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ . ಈ ಘಟನೆಯು ಸಣ್ಣ ಪ್ರಮಾಣದ ಆಹಾರ ಉತ್ಪಾದನಾ ಘಟಕಗಳಲ್ಲಿನ ನೈರ್ಮಲ್ಯ ಮಾನದಂಡಗಳ ಬಗ್ಗೆ ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
Asianet News report:, ‘They tasted the ice cream.’
But they do know that ‘tasting’ isn’t about licking every ice cream to check. Instead, it’s a ‘halal spitting practice.’
If they say such things, Kerala’s secularism might collapse!
They are scared that if people find out… pic.twitter.com/zVu8ngqJrq
— Pratheesh Viswanath (@pratheesh_Hind) November 21, 2024