HomeKarnatakaBREAKING NEWS: ಹೆತ್ತ ತಾಯಂದಿರಿಂದಲೇ ಕಿಡ್ನ್ಯಾಪ್ ಆಗಿದ್ದ 6 ಮಕ್ಕಳ ರಕ್ಷಣೆ

BREAKING NEWS: ಹೆತ್ತ ತಾಯಂದಿರಿಂದಲೇ ಕಿಡ್ನ್ಯಾಪ್ ಆಗಿದ್ದ 6 ಮಕ್ಕಳ ರಕ್ಷಣೆ

ಧಾರವಾಡ: ಹೆತ್ತ ತಾಯಂದಿರಿಂದಲೇ ಅಪಹರಣಕ್ಕೊಳಗಾಗಿದ್ದ 6 ಮಕ್ಕಳನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಪ್ರಿಯಕರರೊಂದಿಗೆ ಸೇರಿ ಮಕ್ಕಳನ್ನೇ ಅಪಹರಿಸಿದ್ದ ಇಬ್ಬರು ತಾಯಂದಿರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರೇಷ್ಮಾ ಹಾಗೂ ಪ್ರಿಯಾಂಕಾ ಎಂಬ ಮಹಿಳೆಯರು ಮಕ್ಕಳನ್ನು ಹಾಸ್ಟೇಲ್ ಗೆ ಸೇರಿಸುವುದಾಗಿ ಹೇಳಿ ಕರೆದೊಯ್ದಿದ್ದರು. ನವೆಂಬರ್ 7ರಂದ ಇಬ್ಬರು ತಾಯಂದಿರು ಹಾಗೂ 6 ಮಕ್ಕಳು ನಾಪತ್ತೆಯಾಗಿದ್ದರು.

ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರುಗೆ ತಾಯಂದಿರೇ ಮಕ್ಕಳನ್ನು ಅಪಹರಿಸಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ರೇಷ್ಮಾ ಹಾಗೂ ಪ್ರಿಯಾಂಕಾ ಸಾಂಬ್ರಾಣಿ ಎಂಬ ಮಹಿಳೆಯರು ಅನ್ಯಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಮುತ್ತುರಾಜ್ ಹಾಗೂ ಸುನೀಲ್ ಎಂಬುವವರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಪ್ರಿಯಕರರ ಜೊತೆ ಮಕ್ಕಳ ಸಮೇತ ನಾಪತ್ತೆಯಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ನಾಪತ್ತೆಯಾದವರು ಕುಟುಂಬಸ್ಥರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮಕ್ಕಳನ್ನು ಎಲ್ಲಿಯಾದರೂ ಬಿಟ್ಟು ನೇಪಾಳಕ್ಕೆ ಹೋಗುವುದಾಗಿ ಬೆದರಿಕೆಯೊಡ್ಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ 6 ಮಕ್ಕಳನ್ನು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular