UGNEET-24 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಅವಕಾಶ ಕಲ್ಪಿಸಿದ್ದು, ನ.19ರಿಂದ ಆಪ್ಷನ್ಸ್ ದಾಖಲಿಸಬಹುದು. ವೈದ್ಯಕೀಯ 2, ದಂತ ವೈದ್ಯಕೀಯ 35 ಸೀಟು ಹಂಚಿಕೆಗೆ ಬಾಕಿ ಇವೆ. ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಲು ನ.29 ಕೊನೆ ದಿನವಾಗಿದೆ.
PG NEET-2024 ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನ.19ರಿಂದ ಆರಂಭವಾಗಲಿದೆ. ಆಪ್ಷನ್ಸ್ ದಾಖಲಿಸಲು ನ.22 ಕೊನೆ ದಿನ. ನ.26ಕ್ಕೆ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟ. ಡಿ.4ರೊಳಗೆ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.