ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಇದಕ್ಕೆ ಪೂರಕವಾಗಿ ಆಹಾರ ಧಾನ್ಯ ಹೊತ್ತೊಯ್ಯುವ ವಾಹನಗಳ ಮೇಲೆ ಸಾರ್ವಜನಿಕರು ಮುಗಿಬಿದ್ದ ಆನೇಕ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದರ ಮಧ್ಯೆ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದು ಅಲ್ಲಿನ ಶ್ರೀಮಂತರಿಗೆ ಭಾರೀ ಮುಜುಗರವನ್ನುಂಟು ಮಾಡುತ್ತಿದೆ.
ಪಾಕಿಸ್ತಾನದ ಗುಜ್ರಾನ್ವಾಲಾದ ಭಿಕ್ಷುಕ ಕುಟುಂಬವೊಂದು ಸುಮಾರು 20,000 ಜನರಿಗೆ ಸುಮಾರು 1.25 ಕೋಟಿ (ಪಾಕಿಸ್ತಾನಿ ಕರೆನ್ಸಿ) ರೂಪಾಯಿಗಳ ವೆಚ್ಚದಲ್ಲಿ ಭವ್ಯವಾದ ಔತಣಕೂಟವನ್ನು ಆಯೋಜಿಸಿತ್ತು. ಅಜ್ಜಿಯ ಸಾವಿನ 40 ನೇ ದಿನದ ನೆನಪಿಗಾಗಿ ಕುಟುಂಬವು ಇದನ್ನು ಆಯೋಜಿಸಿದ್ದು, ಅತಿಥಿಗಳು ಆಗಮಿಸಲು ಸುಮಾರು 2,000 ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಗುಜ್ರಾನ್ವಾಲಾದ ರಹ್ವಾಲಿ ರೈಲ್ವೆ ನಿಲ್ದಾಣದ ಬಳಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಂಜಾಬ್ ನಾದ್ಯಂತ ಸಾವಿರಾರು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು. ಬಂದ ಅತಿಥಿಗಳಿಗೆ ಥರಹೇವಾರಿ ಆಹಾರ ಬಡಿಸಲಾಗಿದೆ.
ಮಧ್ಯಾಹ್ನದ ಊಟಕ್ಕೆ: ಸಿರಿ ಪಾಯಿ, ಮುರಬ್ಬಾ ಮತ್ತು ವಿವಿಧ ಮಾಂಸದ ಭಕ್ಷ್ಯಗಳು.
ರಾತ್ರಿ ಊಟಕ್ಕೆ: ಮೃದುವಾದ ಮಟನ್, ನಾನ್ ಮಾತರ್ ಗಂಜ್ (ಸಿಹಿ ಅನ್ನ) ಮತ್ತು ಹಲವಾರು ಸಿಹಿತಿಂಡಿಗಳನ್ನು ಬಡಿಸಲಾಗಿದೆ. ಆಹಾರ ಸಿದ್ದಪಡಿಸಲು 250 ಆಡುಗಳನ್ನು ಬಳಸಿಕೊಳ್ಳಲಾಗಿದೆ
ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾಗವಹಿಸಿದವರು ಮೆನುವನ್ನು ಶ್ಲಾಘಿಸಿದರೆ, ಇತರರು ಧನಸಹಾಯದ ಮೂಲವನ್ನು ಪ್ರಶ್ನಿಸಿದ್ದಾರೆ. ಭಿಕ್ಷುಕ ಕುಟುಂಬವೊಂದು ಇಂತಹ ಐಷಾರಾಮಿ ಔತಣಕೂಟವನ್ನು ಆಯೋಜಿಸುವ ವಿಪರ್ಯಾಸದ ಬಗ್ಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
“ನಮ್ಮ ಮೋದಿಜಿ ಪ್ರತಿ ತಿಂಗಳು 80 ಕೋಟಿ ಭಿಕ್ಷುಕರಿಗೆ ಆಹಾರವನ್ನು ನೀಡುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದರೆ, ಇನ್ನೊಬ್ಬರು “ಪಾಕಿಸ್ತಾನವು ಭಿಕ್ಷುಕರ ದೇಶ” ಎಂದು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಪಾಕಿಸ್ತಾನದಲ್ಲಿ ಭಿಕ್ಷುಕರಾಗಿರುವುದರ ಪ್ರಯೋಜನ ನೋಡಿ ಎಂದಿದ್ದಾರೆ.
ಅದ್ದೂರಿ ವೆಚ್ಚವು ಆನ್ ಲೈನ್ ನಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಭಿಕ್ಷುಕರೆಂದು ಗುರುತಿಸಿಕೊಳ್ಳುವ ಒಂದು ಕುಟುಂಬ ಇಂತಹ ಅದ್ದೂರಿ ಸಮಾರಂಭದ ವೆಚ್ಚವನ್ನು ಹೇಗೆ ಭರಿಸಲು ಸಾಧ್ಯವಾಯಿತು ಎಂಬ ಬಗ್ಗೆ ಅನೇಕರಿಗೆ ಕುತೂಹಲವಾಗಿದೆ
گوجرانوالہ میں جھگی واسوں کینگرہ برادری کے بچوں نے اپنی والدہ کے چالیسویں کی تقریبات کو تاریخی بنا دیا
گوجرانوالہ جھگی واسوں کے چھے بچوں نے اپنی والدہ کے چالیسویں کی تقریب پر سوا کروڑ روپے خرچ کیے، 120 سالہ سکینہ بی بی کے 40 ویں کی تقریب میں250 بکرے بھی ذبح کیے گئے۔ چالیسویں کی… pic.twitter.com/ceoevkgd9M
— 365 News (@365newsdotpk) November 15, 2024
Beggars in Gujranwala reportedly spent Rs. 1 crore and 25 lacs on the post funeral ceremony of their grand mother 🤯🤯
Thousands of people attended the ceremony.
They also made arrangement of all kinds of meal including beef, chicken, matranjan, fruits, sweet dishes 😳😳 pic.twitter.com/Jl59Yzra56— Ali (@PhupoO_kA_betA) November 17, 2024