ಶಬರಿಮಲೆ ಯಾತ್ರಿರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ ಪ್ರಾರಂಭಿಸಲಿದೆ.
ನವೆಂಬರ್ 19 ರಿಂದ ಜನವರಿ 15ರವರೆಗೆ ಈ ರೈಲು ಸಂಚರಿಸಲಿದೆ ಇದರ ಜೊತೆಗೆ ವಾರಕ್ಕೊಮ್ಮೆ ಹೆಚ್ಚುವರಿ ರೈಲು ಸಹ ಸಂಚರಿಸಲಿದೆ.
ಹುಬ್ಬಳ್ಳಿ ಹಾಗೂ ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ರೈಲು ಸಂಖ್ಯೆ 07371 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 07372 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ.
2 ಎಸಿ ಟು ಟೈರ್ , 2 ಎಸಿ ತ್ರಿ ಟೈಯರ್, 6 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್ಡಿ ಸೇರಿದಂತೆ 18 ಬೋಗಿಗಳನ್ನು ಹೊಂದಿರಲಿದೆ.
ಇನ್ನು ಹೆಚ್ಚುವರಿಯಾಗಿ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೋಮ್ಮೆ ಒಂದು ವಿಶೇಷ ರೈಲು ಸಂಚರಲಿಸಲಿದೆ. ಈ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹೊರಟು ಮರುದಿನ ಬುಧವಾರ ಕೊಟ್ಟಾಯಂ ತಲುಪಲಿದೆ.
ರೈಲು ಸಂಖ್ಯೆ 07371 ಹುಬ್ಬಳ್ಳಿ-ಕೊಟ್ಟಾಯಂ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬುಧವಾರ ಮಧ್ಯರಾತ್ರಿ 12ಕ್ಕೆ ಕೊಟ್ಟಾಯಂ ತಲುಪಲಿದೆ.
ರೈಲು ಸಂಖ್ಯೆ 07372 ಕೊಟ್ಟಾಯಂ-ಹುಬ್ಬಳ್ಳಿ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯರಾತ್ರಿ 12:50ಕ್ಕೆ ಕೊಟ್ಟಾಯಂನಿಂದ ಹೊರಟು ಮರುದಿನ ಬುಧವಾರ ಮಧ್ಯಾಹ್ನ 03:00ಕ್ಕೆ ಹುಬ್ಬಳ್ಳಿ ತಲುಪಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸಿಕೆರೆ, ತುಮಕೂರು, ಚಿಕ್ಕಬಣಾವರ, ಎಸ್ಎಂಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಅಲುವ, ಎರ್ನಾಕುಲಂ ಟೌನ್, ಎಟ್ಟುಮನೂರ್ ಮತ್ತು ಕೊಟ್ಟಾಯಂ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.