HomeIndiaBIG NEWS : ತೆಲಂಗಾಣದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು : 37 ರೈಲುಗಳ ಸಂಚಾರದಲ್ಲಿ...

BIG NEWS : ತೆಲಂಗಾಣದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು : 37 ರೈಲುಗಳ ಸಂಚಾರದಲ್ಲಿ ವ್ಯತ್ಯಯ.!

ತೆಲಂಗಾಣದ ಪೆದ್ದಪಲ್ಲಿ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಪರಿಣಾಮ 30 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ದೆಹಲಿ ಮತ್ತು ಚೆನ್ನೈ ನಡುವಿನ ರೈಲು ಮಾರ್ಗದಲ್ಲಿ ಅಡೆತಡೆಗಳು ಉಂಟಾಗಿವೆ. ಗಾಜಿಯಾಬಾದ್ನಿಂದ ಕಾಜಿಪೇಟ್ಗೆ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಸರಕು ರೈಲು ಪೆದ್ದಪಲ್ಲಿ ಜಿಲ್ಲೆಯ ರಾಘವಪುರ ಮತ್ತು ಕನ್ನಾಲ್ ನಡುವೆ ಹಳಿ ತಪ್ಪಿದಾಗ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಗುಡ್ಸ್ ರೈಲು ಹಳಿ ತಪ್ಪಿರುವ ಪರಿಣಾಮ ಈ ಮಾರ್ಗದಲ್ಲಿ ಸಾಗುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳು, ಪ್ಯಾಸೆಂಜರ್ ರೈಲುಗಳು ಹಾಗೂ ಇತರ ಸರಕು ಸಗಾಣೆ ರೈಲುಗಳು ಮಾರ್ಗಮಧ್ಯೆ ನಿಲ್ಲುವಂತಾಗಿದೆ. 37 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular