HomeKarnatakaಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಹೆಸರು ಪರಿಶೀಲನೆ-ತಿದ್ದುಪಡಿಗೆ ಅವಕಾಶ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಹೆಸರು ಪರಿಶೀಲನೆ-ತಿದ್ದುಪಡಿಗೆ ಅವಕಾಶ

ಶಿವಮೊಗ್ಗ : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2025 ಕ್ಕೆ ಸಂಬಂಧಿಸಿದಂತೆ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ದಿ: 09-11-2024, 10-11-2024, 23-11-2024 ಮತ್ತು 24-11-24 ರಂದು ತಮ್ಮ ಮತಗಟ್ಟೆಗಲಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿ ಪರಿಶೀಲಿಸಿಕೊಂಡು ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

17 ವರ್ಷ ತುಂಬಿದ ಅಥವಾ 18 ವರ್ಷ ಪೂರೈಸಿದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ಮತದಾರರ ಗುರುತಿನ ಚೀಟಿಗಳಲ್ಲಿ ಮುದ್ರಣ ದೋಷ ಉಂಟಾಗಿದ್ದರೆ ತಿದ್ದುಪಡಿ ಮಾಡಲು, ಒಂದು ಮತದಾನ ಕೇಂದ್ರದಿAದ ಮತ್ತೊಂದು ಮತದಾನ ಕೇಂದ್ರಕ್ಕೆ ವಿಳಾಸ ಬದಲಾಯಿಸಿಕೊಂಡಿದ್ದಲ್ಲಿ ವರ್ಗಾವಣೆ ಮಾಡಲು ಹಾಗೂ ಮತದಾರರು ಮೃತಪಟ್ಟಿದ್ದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅವಕಾಶವಿದೆ.
ಮತದಾರರು ತಮ್ಮ ಮೊಬೈಲ್ ನ ವೋಟರ್ ಹೆಲ್ಪ್ಲೈನ್ ಆ್ಯಪ್ ನಲ್ಲಿ ನಮೂನೆ-6 ರಲ್ಲಿ ಸೇರ್ಪಡೆಗೆ, ನಮೂನೆ-7 ರಲ್ಲಿ ತೆಗೆದುಹಾಕಲು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗಾಗಿ, ವರ್ಗಾವಣೆಗಾಗಿ ಅವಕಾಶವಿದೆ. ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular