HomeLive Newsಪ್ರೊ ಕಬಡ್ಡಿ: ಇಂದಿನ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಹಣಾಹಣಿ

ಪ್ರೊ ಕಬಡ್ಡಿ: ಇಂದಿನ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಹಣಾಹಣಿ

ನಿನ್ನೆಯ ಪ್ರೋ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾ ತಂಡ ಪಟ್ನಾ ಪೈರೇಟ್ಸ್ ಎದುರು ಕೇವಲ ಎರಡು ಅಂತರದಿಂದ ಜಯಭೇರಿ ಬಾರಿಸಿದರೆ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡ ತಮಿಳ್ ತಲೈವಾಸ್ ಎದುರು ಕೇವಲ ಒಂದು ಪಾಯಿಂಟ್ ಗಳಿಂದ ಜಯ ಕಂಡಿದೆ. ಎರಡು ಪಂದ್ಯಗಳು  ರೋಚಕತೆಯಿಂದ  ಸಾಗಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿವೆ.

ಇಂದು  ಮೊದಲ ಪಂದ್ಯದಲ್ಲೇ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿದ್ದು, ಕಬಡ್ಡಿ ಅಭಿಮಾನಿಗಳು ಮತ್ತೊಂದು ರೋಮಾಂಚನಕಾರಿ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ.

ನವೀನ್ ಎಕ್ಸ್ಪ್ರೆಸ್  ತಂಡದಲ್ಲಿಲ್ಲದ ಕಾರಣ ಸಂಕಷ್ಟದಲ್ಲಿರುವ ದಬಾಂಗ್ ಡೆಲ್ಲಿಗೆ ಆಶು ಮಲ್ಲಿಕ್ ಅವರೇ ಬೆನ್ನೆಲುಬಾಗಿ  ನಿಂತಿದ್ದು, ಇಂದು ಈ ತಂಡಕ್ಕೆ ಜಯ ತುಂಬಾ ಮುಖ್ಯವಾಗಿದೆ. ಇದಾದ ಬಳಿಕ  ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಗುಜರಾತ್ ಜೈಂಟ್ಸ್ ಸೆಣಸಾಡಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular