HomeEntertainmentಕಳಪೆ ನಟನೆಯನ್ನು ಮರೆಮಾಚಲು ಚಿತ್ರದಲ್ಲಿ B**bs ಪ್ರದರ್ಶಿಸುತ್ತಿದ್ದರಂತೆ ಈ ನಟಿ.....!

ಕಳಪೆ ನಟನೆಯನ್ನು ಮರೆಮಾಚಲು ಚಿತ್ರದಲ್ಲಿ B**bs ಪ್ರದರ್ಶಿಸುತ್ತಿದ್ದರಂತೆ ಈ ನಟಿ…..!

ಬಾಲಿವುಡ್‌ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸಂಚಲನ ಮೂಡಿಸಿದ್ದ ನಟಿ ಪೂಜಾ ಬೇಡಿ, ತಮ್ಮ ಬೋಲ್ಡ್‌ ಅವತಾರಗಳಿಂದಲೇ ಖ್ಯಾತಿ ಗಳಿಸಿದ್ದರು. ʼಕಾಮಸೂತ್ರʼ ಕಾಂಡೋಮ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅವರು ಅಂದಿನ ದಿನಮಾನಗಳಲ್ಲಿ ಯುವಜನತೆಯ ಎದೆ ಬಡಿತ ಹೆಚ್ಚಿಸಿದ್ದರು.

ಹಿಂದಿಯನ್ನು ಹೊರತುಪಡಿಸಿ, ಪೂಜಾ ಬೇಡಿ ಎರಡು ತೆಲುಗು ಪ್ರಾಜೆಕ್ಟ್‌ಗಳಾದ ಚಿಟ್ಟೆಮ್ಮ ಮೊಗುಡು ಮತ್ತು ಶಕ್ತಿಯ ಭಾಗವಾಗಿದ್ದರೂ ದುರದೃಷ್ಟವಶಾತ್, ಇವೆರಡೂ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು.

ಪೂಜಾ ಅವರ ತಂದೆ ಕಬೀರ್ ಬೇಡಿ ಎಲ್ಲರಿಗೂ ಚಿರಪರಿಚಿತವಾಗಿರುವ ಹೆಸರು ಅವರ ಮಗಳಾದ ಪೂಜಾ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ FICCI ಫ್ಲೋ ಕಾರ್ಯಕ್ರಮಕ್ಕೆ ಹಾಜರಾಗಿ, ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಗಮನಾರ್ಹವಾಗಿ ಆಕೆ ತನ್ನನ್ನು “ಭಯಾನಕ ನಟಿ” ಎಂದು ಕರೆದುಕೊಂಡಿದ್ದು, “ನನ್ನ ಕಳಪೆ ನಟನೆಯಿಂದ ಬೇರೆಡೆ ಗಮನವನ್ನು ಸೆಳೆಯಲು ನಾನು ಆಗಾಗ್ಗೆ ನನ್ನ ಸೀಳನ್ನು ಬಳಸುತ್ತಿದ್ದೆ” ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರರಂಗದ ತನ್ನ ಆರಂಭದ ದಿನಗಳನ್ನು ನೆನಪಿಸಿಕೊಂಡ ಪೂಜಾ, ನಾನು ಎಂದಿಗೂ ಚಲನಚಿತ್ರಗಳ ಭಾಗವಾಗಲು ಬಯಸಲಿಲ್ಲ ಎಂದರಲ್ಲದೇ ಅಮೀರ್ ಖಾನ್ ಜೊತೆಗಿನ, ʼಜೋ ಜೀತಾ ವೋಹಿ ಸಿಕಂದರ್ʼ ಅವರ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ, ತನಗೆ ಹಣದ ಅಗತ್ಯವಿದ್ದ ಕಾರಣಕ್ಕಾಗಿ ಮಾತ್ರ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ ಪೂಜಾ.

ಇನ್ನು ಚಿತ್ರರಂಗದಲ್ಲಿ ʼಸ್ವಜನಪಕ್ಷಪಾತʼ ದ ಕುರಿತು ಮಾತನಾಡಿದ ಪೂಜಾ, ನಟ – ನಟಿಯರ ಮಗು ಅವನ ಅಥವಾ ಅವಳ ಹೆಜ್ಜೆಯನ್ನು ಅನುಸರಿಸಿದಾಗ ಜನರು ಈ ಪದವನ್ನು ಬಳಸಲು ಪ್ರಾರಂಭಿಸುತ್ತಾರೆ, ಆದರೆ ವೈದ್ಯರು ಮತ್ತು ಉದ್ಯಮಿಗಳಂತಹ ಇತರ ವ್ಯಕ್ತಿಗಳಿಗೆ ಬಂದಾಗ ಅದು ಸಂಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೂಜಾ ಕೊನೆಯದಾಗಿ ನೆಟ್‌ಫ್ಲಿಕ್ಸ್ ಶೋ ಮಸಾಬ ಮಸಾಬ ಮತ್ತು ZEE5 ಚಲನಚಿತ್ರ ಕಾಮಿಡಿ ಕಪಲ್ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ನಟಿ ಯಾವುದೇ ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular