HomeKarnatakaಪಂಚ ಗ್ಯಾರಂಟಿ ಪಂಚರ್ ಆಗಿದೆ: ಎಂಎಲ್ ಸಿ ಸಿ.ಟಿ. ರವಿ ವ್ಯಂಗ್ಯ

ಪಂಚ ಗ್ಯಾರಂಟಿ ಪಂಚರ್ ಆಗಿದೆ: ಎಂಎಲ್ ಸಿ ಸಿ.ಟಿ. ರವಿ ವ್ಯಂಗ್ಯ

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಪ್ರಧಾನಿ ಮೋದಿ ಟ್ವೀಟ್ ಗೆ ಪ್ರತಿಕ್ರಿಯಿಸಿ ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ, ಸಿದ್ದರಾಮಯ್ಯನವರೇ ನೀವು ಮೋದಿಯವರನ್ನು ಟೀಕಿಸಿದರೆ ಸೂರ್ಯನಿಗೆ ಉಗಿದಂತೆ. ಅದು ತಿರುಗಿ ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತೆ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪಂಚರ್ ಆಗಿವೆ. ಒಂದೊಂದೇ ಯೋಜನೆಗಳು ನಿಲ್ಲುವ ಹಂತಕ್ಕೆ ಬಂದಿವೆ ಎಂದು ಟೀಕಿಸಿದರು.

ಇಷ್ಟಾಗ್ಯೂ ಪ್ರಧಾನಿ ಮೋದಿಯವರನ್ನು ಬೈದು ಸಿದ್ದರಾಮಯ್ಯನವರು ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ. 2014, 2019, 2024ರಲ್ಲಿ ನೀವು ಚಾಲೇಂಜ್ ಮಾಡಿದ್ರಿ. ಆದರೂ ಜನ ನಿಮ್ಮ ನಾಯಕತ್ವಕ್ಕೆ ಮತ ನೀಡಿಲ್ಲ. ಮೋದಿ ನಾಯಕತ್ವವವನ್ನು ಒಪ್ಪಿಕೊಂಡಿದ್ದಾರೆ. ಅನಗತ್ಯವಾಗಿ ಮೋದಿಯವರನ್ನು ಟೀಕಿಸುವ ವ್ಯರ್ಥ ಪ್ರಯತ್ನ ಬೇಡ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular