ನವದೆಹಲಿ : ಹಾವು ಕಚ್ಚಿದರೆ ಮನುಷ್ಯನು ಸಾಮಾನ್ಯವಾಗಿ ಏನು ಮಾಡುತ್ತಾನೆ? ಮನುಷ್ಯನಿಗೆ ಹಾವು ಕಚ್ಚಿದಾಗ, ಅವನ ತಕ್ಷಣದ ಪ್ರತಿಕ್ರಿಯೆ ಆಘಾತ ಮತ್ತು ಭಯವಾಗಬಹುದು. ತಕ್ಷಣ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಬಹುದು.
ಬಿಹಾರದ ಭಾಗಲ್ಪುರದಲ್ಲಿ ವ್ಯಕ್ತಿಯೊಬ್ಬನಿಗೆ Russell’s viper ಎಂಬ ವಿಷಕಾರಿ ಹಾವು ಕಚ್ಚಿದೆ, ಇದಕ್ಕೆ ಭಯಪಡದೇ ಆತ ಧೈರ್ಯದಿಂದ ಹಾವಿನ ಬಾಯಿಯನ್ನು ಹಿಡಿದು ಆಸ್ಪತ್ರೆಗೆ ಹೋಗಿದ್ದಾನೆ. ಆತ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ಆಸ್ಪತ್ರೆಗೆ ಪ್ರವೇಶಿಸುವ ವೀಡಿಯೊ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.
बिहार के भागलपुर में एक शख्स को सांप ने काट लिया, जिसके बाद आदमी सांप पकड़कर अपने साथ अस्पताल ले आया. pic.twitter.com/jwoxj1N1sM
— Priya singh (@priyarajputlive) October 16, 2024

