HomeKarnatakaಮೈಸೂರು ಅರಮನೆಯ ದೀಪಾಲಂಕಾರ ವೀಕ್ಷಿಸಿ ಬಾಲ್ಯದ ನೆನಪು ಮಾಡಿಕೊಂಡ CM ಸಿದ್ದರಾಮಯ್ಯ.!

ಮೈಸೂರು ಅರಮನೆಯ ದೀಪಾಲಂಕಾರ ವೀಕ್ಷಿಸಿ ಬಾಲ್ಯದ ನೆನಪು ಮಾಡಿಕೊಂಡ CM ಸಿದ್ದರಾಮಯ್ಯ.!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮೈಸೂರು ದಸರಾದ ದೀಪಾಲಂಕಾರ ವೀಕ್ಷಿಸಿ ಬಾಲ್ಯದ ನೆನಪು ಮಾಡಿಕೊಂಡರು.

ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ   ‘ನನ್ನೂರ ಐತಿಹಾಸಿಕ ದಸರಾದ ದೀಪಾಲಂಕಾರವನ್ನು ತೆರೆದ ಬಸ್ಸಿನಲ್ಲಿ ಪ್ರಯಾಣಿಸುತ್ತಾ ವೀಕ್ಷಿಸಿದೆ. ಬಾಲ್ಯದ ದಿನಗಳಿಂದ ಹಿಡಿದು ಇಂದಿನ ವರೆಗೂ ಪ್ರತಿ ಬಾರಿ ಮೈಸೂರು ದಸರಾದಲ್ಲಿ ನಾನು ಪಾಲ್ಗೊಂಡಾಗಲೂ ಅದೇ ಖುಷಿ, ಅದೇ ಸೊಗಸು. ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ದಸರೆಯ ಮೂಲಕ ತಲೆಮಾರುಗಳ ವರೆಗೆ ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದರು.

ವರ್ಷಗಳು ಉರುಳಿದಂತೆ ಧಾರ್ಮಿಕ ಆಚರಣೆಯೊಂದು ಎಲ್ಲರನ್ನೂ ಒಳಗೊಂಡ ಸಾಂಸ್ಕೃತಿಕ ಆಚರಣೆಯಾಗಿ, ಜನರ ಉತ್ಸವದಂತಾಗುತ್ತಿರುವುದು ಮತ್ತಷ್ಟು ಖುಷಿಯ ವಿಚಾರ. ದಸರಾದ ಯಶಸ್ಸಿಗೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular