HomeKarnatakaSHOCKING: ಮೂರು ತಿಂಗಳಿಂದ ಸಿಗದ ವೇತನ, ಆಸಿಡ್ ಕುಡಿದ ಅಂಗನವಾಡಿ ಸಹಾಯಕಿ

SHOCKING: ಮೂರು ತಿಂಗಳಿಂದ ಸಿಗದ ವೇತನ, ಆಸಿಡ್ ಕುಡಿದ ಅಂಗನವಾಡಿ ಸಹಾಯಕಿ

ದಾವಣಗೆರೆ: ಕಳೆದ ಮೂರು ತಿಂಗಳಿಂದ ವೇತನ ಸರಿಯಾಗಿ ಬಂದಿಲ್ಲವೆಂದು ನೊಂದ ಅಂಗನವಾಡಿ ಸಹಾಯಕಿಯೊಬ್ಬರು ಆಸಿಡ್ ಕುಡಿದಿದ್ದಾರೆ. ಸಾಲ ತೀರಿಸಲು ಹಣ ಇಲ್ಲದ ಕಾರಣ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಕೆಟಿಜೆ ನಗರದ ಡಾಂಗೆ ಪಾರ್ಕ್ ಆವರಣದ ಅಂಗನವಾಡಿ ಕೇಂದ್ರದ ಸಹಾಯಕಿ ಬಾರತಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದವರು. ಅವರ ಪತಿ ಆಟೋರಿಕ್ಷಾ ಚಾಲನೆ ಮಾಡುತ್ತಾರೆ. ಅಂಗನವಾಡಿ ಸಹಾಯಕರಾಗಿ ಕೆಲಸ ಮಾಡುವ ಭಾರತಿ ಬರುವ ವೇತನದಲ್ಲಿ ಪುಟ್ಟ ಕುಟುಂಬ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಆದರೆ, ಕಳೆದ ಮೂರು ತಿಂಗಳಿಂದ ಅಂಗನವಾಡಿ ವೇತನ ಭಾರತಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅವರು ಸಾಲ ತೀರಿಸಲು ಹಣವಿಲ್ಲದ ಕಾರಣ ದಿಕ್ಕೇ ತೋಚದಂತಾಗಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅವರ ಪತಿ, ಮಕ್ಕಳು ಮತ್ತು ಅಕ್ಕಪಕ್ಕದವರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಭಾರತಿ ಚೇತರಿಸಿಕೊಳ್ಳುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular