alex Certify BIG NEWS: ನಾಪತ್ತೆಯಾಗಿದ್ದ ಉದ್ಯಮಿ ಕೆರೆಯಲ್ಲಿ ಶವವಾಗಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಪತ್ತೆಯಾಗಿದ್ದ ಉದ್ಯಮಿ ಕೆರೆಯಲ್ಲಿ ಶವವಾಗಿ ಪತ್ತೆ

ಕೊಪ್ಪಳ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕೊಪ್ಪಳ ಮೂಲದ ಉದ್ಯಮಿ ಇದೀಗ ಹುಲಿಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಪ್ಪಳ ಹೊರವಲಯದಲ್ಲಿ ನಡೆದಿದೆ.

ಉದ್ಯಮಿ ಅರ್ಜುನ್ ಸಾ ಕಾಟ್ವಾ ಮೃತ ಉದ್ಯಮಿ. ಕೊಪ್ಪಳ ನಗರದ ವಿದ್ಯಾನಗರದ ನಿವಾಸಿ. ಕೆಲ ದಿನಗಳಿಂದ ಏಕಾಏಕಿ ನಾಪತ್ತೆಯಾಗಿದ್ದರು. ಇಂದು ಮುಂಜಾನೆ ಅವರ ಶವ ಕೊಪ್ಪಳದ ಹೊರವಲಯದ ಹುಲಿಕೆರೆಯಲ್ಲಿ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರು ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಅರ್ಜುನ್ ಸಾ ಕಾಟ್ವಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...