HomeKarnatakaBIG NEWS: ನಾಪತ್ತೆಯಾಗಿದ್ದ ಉದ್ಯಮಿ ಕೆರೆಯಲ್ಲಿ ಶವವಾಗಿ ಪತ್ತೆ

BIG NEWS: ನಾಪತ್ತೆಯಾಗಿದ್ದ ಉದ್ಯಮಿ ಕೆರೆಯಲ್ಲಿ ಶವವಾಗಿ ಪತ್ತೆ

ಕೊಪ್ಪಳ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕೊಪ್ಪಳ ಮೂಲದ ಉದ್ಯಮಿ ಇದೀಗ ಹುಲಿಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಪ್ಪಳ ಹೊರವಲಯದಲ್ಲಿ ನಡೆದಿದೆ.

ಉದ್ಯಮಿ ಅರ್ಜುನ್ ಸಾ ಕಾಟ್ವಾ ಮೃತ ಉದ್ಯಮಿ. ಕೊಪ್ಪಳ ನಗರದ ವಿದ್ಯಾನಗರದ ನಿವಾಸಿ. ಕೆಲ ದಿನಗಳಿಂದ ಏಕಾಏಕಿ ನಾಪತ್ತೆಯಾಗಿದ್ದರು. ಇಂದು ಮುಂಜಾನೆ ಅವರ ಶವ ಕೊಪ್ಪಳದ ಹೊರವಲಯದ ಹುಲಿಕೆರೆಯಲ್ಲಿ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರು ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಅರ್ಜುನ್ ಸಾ ಕಾಟ್ವಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular