HomeKarnatakaBIG NEWS: ಹೆಚ್.ಡಿ.ಕೆಗೆ ಮಾತನಾಡಲು ವಿಷವವಿಲ್ಲದೇ ಹುಚ್ಚರ ಹಾಗೇ ಒದರಾಡುತ್ತಿದ್ದಾರೆ: ಸಚಿವ ಬೋಸರಾಜ್ ವಾಗ್ದಾಳಿ

BIG NEWS: ಹೆಚ್.ಡಿ.ಕೆಗೆ ಮಾತನಾಡಲು ವಿಷವವಿಲ್ಲದೇ ಹುಚ್ಚರ ಹಾಗೇ ಒದರಾಡುತ್ತಿದ್ದಾರೆ: ಸಚಿವ ಬೋಸರಾಜ್ ವಾಗ್ದಾಳಿ

ರಾಯಚೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಮಾತನಾಡಲು ವಿಷವಿಲ್ಲ. ಹಾಗಾಗಿ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಸಚಿವರು, ಮುಡಾ ವಿಚಾರವಾಗಿ ಮನನೊಂದು ಸ್ವಚ್ಛೆಯಿಂದ 14 ಸೈಟ್ ಗಳನ್ನು ವಾಪಾಸ್ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸೈಟ್ ವಾಪಾಸ್ ಕೊಟ್ಟಿದ್ದಾರೆ. ಸೈಟ್ ವಾಪಾಸ್ ಕೊಟ್ಟ ಮೇಲೆ ಹೆಚ್.ಡಿ.ಕೆಗೆ ಮಾತನಾಡಲು ವಿಷಯವಿಲ್ಲದಾಗಿದೆ. ಅದಕ್ಕೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣದಲ್ಲಿ ತಮ್ಮ ಪತಿ ಹೆಸರಿಗೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ನೊಂದು ಸೈಟ್ ವಾಪಾಸ್ ಕೊಡುತ್ತೇನೆ ಎಂದು ಹೇಳಿ ವಾಪಾಸ್ ಕೊಟ್ಟಿದ್ದಾರೆ. ಇಷ್ಟಾರೂ ಕುಮರಸ್ವಾಮಿ ಹೇಗೆ ಸೈಟ್ ಸರಂಡರ್ ಮಾಡಿದರು? ಮೊದಲು ಯಾಕೆ ಮಾಡಿಲ್ಲ ಎಂದು ಕೇಳುತ್ತಿದ್ದಾರೆ. ಅತ್ತ ಆರ್.ಅಶೋಕ್ ನಾನು ಆಗಲೇ ನನ್ನ ಜಾಗ ಮರಳಿಸಿದ್ದೆ ಎನ್ನುತ್ತಿದ್ದಾರೆ. ಒಬ್ಬ ಕೇಂದ್ರ ಸಚಿವರಿಗೆ, ಇನ್ನೋರ್ವ ವಿಪಕ್ಷ ನಾಯಕರಿಗೆ ಇದನ್ನು ಮಾತನಾಡಲು ಯಾವ ಬದ್ಧತೆ ಇದೆ? ಇಬ್ಬರೂ ಬಾಯಿಗೆ ಬಂದಂತೆ ಒದರಾಡುತ್ತಿದ್ದಾರೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular