HomeIndiaSHOCKING : ದೇಶದಲ್ಲಿ ನಿಲ್ಲುತ್ತಿಲ್ಲ ಕಾಮಾಂಧರ ಅಟ್ಟಹಾಸ : ಮಹಾರಾಷ್ಟ್ರದಲ್ಲಿ ಯುವತಿ ಮೇಲೆ 'ಗ್ಯಾಂಗ್ ರೇಪ್'..!

SHOCKING : ದೇಶದಲ್ಲಿ ನಿಲ್ಲುತ್ತಿಲ್ಲ ಕಾಮಾಂಧರ ಅಟ್ಟಹಾಸ : ಮಹಾರಾಷ್ಟ್ರದಲ್ಲಿ ಯುವತಿ ಮೇಲೆ ‘ಗ್ಯಾಂಗ್ ರೇಪ್’..!

ದೇಶದಲ್ಲಿ ಕಾಮಾಂಧರ ಅಟ್ಟಹಾಸ ಮುಂದುವರೆದಿದ್ದು, ಮಹಾರಾಷ್ಟ್ರದಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿದೆ.ರಾತ್ರಿ 11 ಗಂಟೆ ಸುಮಾರಿಗೆ ಕಾಮುಕರು ಮಹಿಳೆಯ ಪುರುಷ ಸ್ನೇಹಿತನನ್ನು ಥಳಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ನಂತರ ಆ ವ್ಯಕ್ತಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.

ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಈ ವಿಷಯ ಬೆಳಕಿಗೆ ಬಂದಿದ್ದು. ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರನ್ನು ಪುಣೆ ನಿವಾಸಿಗಳು ಎಂದು ಗುರುತಿಸಲಾಗಿದೆ, ದುಷ್ಕರ್ಮಿಗಳನ್ನು ಬಂಧಿಸಲು ಅಪರಾಧ ವಿಭಾಗದ ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಸಂತ್ರಸ್ತ ಯುವತಿ ರಾಜ್ಯದ ಜಲ್ಗಾಂವ್ ಮೂಲದವರಾಗಿದ್ದರೆ, ಆಕೆಯ ಪುರುಷ ಸ್ನೇಹಿತ ಗುಜರಾತ್ನ ಸೂರತ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಪುಣೆಯ ಕಾಲೇಜೊಂದರಲ್ಲಿ ಓದುತ್ತಿದ್ದರು.
ಏತನ್ಮಧ್ಯೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖಂಡ ಆನಂದ್ ದುಬೆ ಈ ಘಟನೆಯನ್ನು ಖಂಡಿಸಿದರು ಮತ್ತು ರಾಜ್ಯದ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಮಹಿಳೆಯರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular