ಅಭಿಷೇಕ್ ಶೆಟ್ಟಿ ನಿರ್ದೇಶನದ ಅನೀಶ್ ಅಭಿನಯದ ‘ಆರಾಮ ಅರವಿಂದಸ್ವಾಮಿ’ ಚಿತ್ರದ ಮತ್ತೊಂದು ಹಾಡು ಮುಂದೆ ಹೇಗೋ ಏನೋ ಎಂಬ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ ಈ ಕುರಿತು ನಟಿ ಮಿಲನ ನಾಗರಾಜ್ ತಮ್ಮ instagram ಖಾತೆಯಲ್ಲಿ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಅನೀಶ್ಗೆ ಜೋಡಿಯಾಗಿ ಮಿಲನ ನಾಗರಾಜ್ ಅಭಿನಯಿಸಿದ್ದು, 786 ಫಿಲ್ಮ್ಸ್ ಮತ್ತು ಐಕ್ಯ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಪ್ರಶಾಂತ್ ರೆಡ್ಡಿ ಎಸ್, ಶ್ರೀಕಾಂತ್ ಪ್ರಸನ್ನ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಉಮೇಶ್ ಆರ್ ಬಿ ಸಂಕಲನ, ಶಿವ. ಸಾಗರ್ ಛಾಯಾಗ್ರಹಣ, ಹಾಗೂ ಬಾಬಾ ಭಾಸ್ಕರ್ ಅವರ ನೃತ್ಯ ನಿರ್ದೇಶನವಿದೆ.