HomeEntertainmentಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಆಲಿಯಾ ಭಟ್ ಅಭಿನಯದ 'ಜಿಗ್ರಾ'

ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಆಲಿಯಾ ಭಟ್ ಅಭಿನಯದ ‘ಜಿಗ್ರಾ’

ವಾಸನ್ ಬಾಲ ನಿರ್ದೇಶನದ ಆಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ‘ಜಿಗ್ರಾ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದ್ದು ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅಲಿಯಾ ಭಟ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೇ ಅಕ್ಟೋಬರ್ 11ರಂದು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಅಲಿಯಾ ಭಟ್ ಸೇರಿದಂತೆ ವೇದಾಂಗ್ ರೈನಾ, ಆದಿತ್ಯ ನಂದಾ, ಸೋಭಿತಾ ಧೂಳಿಪಾಲ, ಮನೋಜ್ ಪಹ್ವಾ, ರಾಹುಲ್ ರವೀಂದ್ರನ್, ಆಕಾಂಶಾ ರಂಜನ್ ಕಪೂರ್, ಬಣ್ಣ ಹಚ್ಚಿದ್ದು, ಧರ್ಮ ಪ್ರೊಡಕ್ಷನ್ಸ್, ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿಅಪೂರ್ವ ಮೆಹ್ತಾ, ಆಲಿಯಾ ಭಟ್, ಶಾಹೀನ್ ಭಟ್, ಸೌಮೆನ್ ಮಿಶ್ರಾ, ನಿರ್ಮಾಣ ಮಾಡಿದ್ದಾರೆ. ಅಚಿಂತ್ ಠಕ್ಕರ್ ಮತ್ತು ಮನ್‌ಪ್ರೀತ್ ಸಿಂಗ್ ಸಂಯೋಜನೆ ನೀಡಿದ್ದು, ಪ್ರೇರಣಾ ಸೈಗಲ್ ಸಂಕಲನ, ಹಾಗೂ ಸ್ವಪ್ನಿಲ್ ಎಸ್. ಸೋನಾವನೆ ಅವರ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
RELATED ARTICLES

Most Popular