HomeCrimeVideo: ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ; ಫೈನಾನ್ಸ್ ಕಂಪನಿ ಅಧಿಕಾರಿಗೆ ಮಹಿಳೆಯಿಂದ ಗೂಸಾ

Video: ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ; ಫೈನಾನ್ಸ್ ಕಂಪನಿ ಅಧಿಕಾರಿಗೆ ಮಹಿಳೆಯಿಂದ ಗೂಸಾ

ಮಹಾರಾಷ್ರ್-ದ ಪುಣೆಯಲ್ಲಿ ಮಹಿಳೆಯೊಬ್ಬರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ ಫೈನಾನ್ಸ್ ಕಂಪನಿಯ ಅಧಿಕಾರಿಯನ್ನು ಥಳಿಸಲಾಗಿದೆ. ಮಹಿಳೆಯೇ ಅಧಿಕಾರಿಯನ್ನು ಶಿವಸೇನಾ (ಯುಬಿಟಿ) ನಾಯಕ ವಸಂತ ಮೋರೆ ಅವರ ಕಚೇರಿಯಲ್ಲಿ ಥಳಿಸಿದ್ದಾರೆ. ಘಟನೆಯ ವೀಡಿಯೊವನ್ನು ವಸಂತಮೋರೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಪಾಠಕ್ ಕುಲಕರ್ಣಿ ಎಂಬ ಮಹಿಳೆ ಘಟನೆಯನ್ನು ವಿಡಿಯೋದಲ್ಲಿ ವಿವರಿಸಿದ್ದು, “ನಾನು ಒಂದು ವಾಹನವನ್ನು ತೆಗೆದುಕೊಂಡಿದ್ದೇನೆ. ಅದರ ಎರಡು ಕಂತುಗಳು ಬಾಕಿ ಉಳಿದಿವೆ. ಫೈನಾನ್ಸ್ ಕಂಪನಿಯು ನನಗೆ ತಿಳಿಸದೇ ಅಧಿಕಾರಿಗಳನ್ನು ಕಳುಹಿಸಿ ನನ್ನ ವಾಹನವನ್ನು ತೆಗೆದುಕೊಂಡು ಹೋಗಿತ್ತು. ನಾನು ಹೆದರಿ ವಸಂತ ಮೋರೆ ಅವರಿಗೆ ಕರೆ ಮಾಡಿದೆ. ನನಗೆ ಅವರು ಫೈನಾನ್ಸ್ ಕಂಪನಿಗೆ ಹೋಗುವಂತೆ ಹೇಳಿದರು. ಬಳಿಕ ಅವರು ಕಂಪನಿಯ ಕಚೇರಿಗೆ ಕರೆ ಮಾಡಿ ಅಧಿಕಾರಿಯೊಂದಿಗೆ ಮಾತನಾಡಿದ ನಂತರ, ನನಗೆ ನನ್ನ ವಾಹನವನ್ನು ಹಿಂತಿರುಗಿಸಲಾಯಿತು. ಆದರೆ ಅಧಿಕಾರಿಯು ನನಗೆ ಮಾನಸಿಕ ಕಿರುಕುಳ ನೀಡಿದರು. ಅಸಭ್ಯ ಸಂದೇಶಗಳನ್ನು ಕಳುಹಿಸಿದರು” ಎಂದಿದ್ದಾರೆ.

ಇಂತಹ ಕೃತ್ಯವೆಸಗಿದ ಅಧಿಕಾರಿಯನ್ನು ವಸಂತ ಮೋರೆ ಅವರ ಕಚೇರಿಗೆ ಕರೆಸಿ ಅಲ್ಲಿ ಅವರನ್ನು ಮಹಿಳೆ ಮತ್ತು ಆಕೆಯ ತಾಯಿ ಥಳಿಸಿದ್ದಾರೆ. ಈ ವೇಳೆ ವಸಂತ ಮೋರೆ ಅಧಿಕಾರಿಗೆ ಎಚ್ಚರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular