HomeKarnatakaಏಡ್ಸ್ ಹರಡಿಸಲು ಮುನಿರತ್ನ ಷಡ್ಯಂತ್ರ ಆಘಾತಕಾರಿ; ಮುನಿರತ್ನ ಜೊತೆ ಓಡಾಡಿದವರೂ HIV ಟೆಸ್ಟ್ ಮಾಡಿಸಿಕೊಳ್ಳಲಿ; ಶಾಸಕ...

ಏಡ್ಸ್ ಹರಡಿಸಲು ಮುನಿರತ್ನ ಷಡ್ಯಂತ್ರ ಆಘಾತಕಾರಿ; ಮುನಿರತ್ನ ಜೊತೆ ಓಡಾಡಿದವರೂ HIV ಟೆಸ್ಟ್ ಮಾಡಿಸಿಕೊಳ್ಳಲಿ; ಶಾಸಕ ಡಾ.ರಂಗನಾಥ್ ಆಗ್ರಹ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ, ಹೆಚ್ ಐವಿ ಸೋಂಕಿತ ಮಹಿಳೆ ಬಳಸಿಕೊಂಡು ಹನಿಟ್ರ್ಯಾಪ್ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ಏಡ್ಸ್ ಹರಡಿಸಲು ಮುನಿರತ್ನ ನಡೆಸಿರುವ ಪ್ರಯತ್ನ ಆಘಾತಕಾರಿಯಾಗಿದೆ. ಹೆಚ್.ಐವಿ ಸೋಂಕಿತ ಮಹಿಳೆಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿರುವುದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಗನಾಥ್, ಮುನಿರತ್ನ ಪ್ರಕರಣವನ್ನು ಎಸ್ ಐಟಿಗೆ ಕೊಡಬೇಕು. ಏಡ್ಸ್ ಹರಡಿಸಲು ಶಾಸಕರು ಯತ್ನಿಸಿದ್ದಾರೆ. ಮುನಿರತ್ನ ಕೆಲಸಕ್ಕೆ ಸಿ.ಟಿ.ರವಿ, ಆರ್.ಅಶೋಕ್, ಹೆಚ್ ಡಿಕೆ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದಾರೆ.

ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ಸೋಂಕಿತರು ಇದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬಹಳಷ್ಟು ಬಿಜೆಪಿ ನಾಯಕರಿಗೂ ಹೆಚ್ ಐವಿ ಟೆಸ್ಟ್ ಆಗಬೇಕು. ಮುನಿರತ್ನ ಜೊತೆ ಓಡಾಟ ನಡೆಸಿದ ಎಲ್ಲರೂ ಹೆಚ್ ಐವಿ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular