HomeEntertainment'out of ಸಿಲಬಸ್' ಚಿತ್ರದ ಮತ್ತೊಂದು ಹಾಡು ರಿಲೀಸ್

‘out of ಸಿಲಬಸ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘out of ಸಿಲಬಸ್’ ಚಿತ್ರದ ಮತ್ತೊಂದು ಹಾಡು ಇಂದು ಜಾನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ”ನಿನಗಾಗಿ ಕಾದ” ಎಂಬ ಈ ಹಾಡಿಗೆ ವಿಜಯ್ ಪ್ರಕಾಶ್ ಹಾಗೂ ಹರ್ಷಿತ್ ಅಗಸ್ತ್ಯ ಧ್ವನಿಯಾಗಿದ್ದು, ಶ್ರೀಹರಿ ಪ್ರೇಮ್ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಪ್ರದೀಪ್ ದೊಡ್ಡಯ್ಯ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು Ad6 ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ತನುಷ್ s.v ದೇಸಾಯಿಗೌಡ ಹಾಗೂ ಶ್ರೀಮತಿ ಕೆ ವಿಜಯಕಲಾ ಸುಂದರ್ ನಿರ್ಮಾಣ ಮಾಡಿದ್ದು,  ಪ್ರದೀಪ್ ದೊಡ್ಡಯ್ಯ ಸೇರಿದಂತೆ ಹೃತಿಕ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ಮಹಾಂತೇಶ್ ಹಿರೇಮಠ ಬಣ್ಣ ಹಚ್ಚಿದ್ದಾರೆ. ಉಮೇಶ್ ಆರ್ಬಿ ಸಂಕಲನ, ದೇವ್ ವಡ್ಡೆ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular