HomeKarnatakaSSLC, ITI ಪಾಸಾದವರಿಗೆ ಗುಡ್ ನ್ಯೂಸ್ : 'HAL' ನಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ...

SSLC, ITI ಪಾಸಾದವರಿಗೆ ಗುಡ್ ನ್ಯೂಸ್ : ‘HAL’ ನಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್, ಬೆಂಗಳೂರು ಅವರು ಅಪ್ರೆಂಟೀಸ್ (ಶಿಶಿಕ್ಷು) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ.

ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಯೊಂದಿಗೆ ಐಟಿಐ ವಿಭಾಗದಲ್ಲಿ ಫಿಟ್ಟರ್, ಟೆರ್ನ್ರ್, ಮೆಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೊಪಾ, ಸೀಟ್ ಮೆಟಲ್ವರ್ಕರ್, ಟೂಲ್ ಅಂಡ್ ಡೈ ಮೇಕರ್, ಸಿಎನ್ಸಿ ಪ್ರೋಗ್ರಾಮರ್ ಕಮ್ ಆಪರೇಟರ್ ಟ್ರೇಡ್ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

ವಯೋಮಿತಿ 18 ರಿಂದ 30 ವರ್ಷಗಳು. ತರಬೇತಿ ಅವಧಿಯಲ್ಲಿ ಸರ್ಕಾರಿ ನಿಯಮಾನುಸಾರ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿ ನಮೂನೆ ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಮರು ಅರ್ಜಿ ಸಲ್ಲಿಸಲು ಅಕ್ಟೋಬರ್, 10 ಕೊನೆ ದಿನವಾಗಿದೆ. ನಿಗದಿತ ಅರ್ಜಿ ನಮೂನೆಯೊಂದಿಗೆ ಎಸ್ಎಸ್ಎಲ್ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಪ.ಜಾತಿ/ಪ.ಪಂಗಡ/ಓ.ಬಿ.ಸಿ/ಅಂಗವಿಕಲ ಸರ್ಟಿಫಿಕೇಟ್, ಆಧಾರ್ಕಾರ್ಡ್ ಮತ್ತು ಪಾನ್ ಕಾರ್ಡ್ ಜೆರಾಕ್ಷ್ಪ್ರತಿ, ಎನ್.ಟಿ.ಸಿ. ಪ್ರಮಾಣಪತ್ರ, ಒಂದು ಪಾಸ್ಪೋರ್ಟ್ ಭಾವಚಿತ್ರ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ವಿಳಾಸ: https://apprenticeshipindia.gov.in/candidate-registration ನಲ್ಲಿ ನೋಂದಾಯಿಸಿದ ವಿವರದ ಪ್ರತಿಯೊಂದಿಗೆ ನಿಗದಿತ ದಿನಾಂಕದೊಳಗೆ ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08272-225851, 8296020826, 8123312319 ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular