HomeEntertainmentರಾಷ್ಟ್ರೀಯ ಚಲನಚಿತ್ರದ ಅಂಗವಾಗಿ ವಿಶೇಷ ಆಫರ್ ಕೊಟ್ಟ 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ 'ರಾನಿ' ಚಿತ್ರತಂಡ

ರಾಷ್ಟ್ರೀಯ ಚಲನಚಿತ್ರದ ಅಂಗವಾಗಿ ವಿಶೇಷ ಆಫರ್ ಕೊಟ್ಟ ‘ಇಬ್ಬನಿ ತಬ್ಬಿದ ಇಳೆಯಲಿ’ ಹಾಗೂ ‘ರಾನಿ’ ಚಿತ್ರತಂಡ

ನಾಳೆ ರಾಷ್ಟ್ರೀಯ ಚಲನಚಿತ್ರ ದಿನವಾಗಿದ್ದು, ‘ಇಬ್ಬನಿ ತಬ್ಬಿದ ಇಳೆಯಲಿ’ ಹಾಗೂ ‘ರಾನಿ’ ಚಿತ್ರತಂಡ ಪ್ರೇಕ್ಷಕರಿಗೆ ವಿಶೇಷ ಆಫರ್  ನೀಡುತ್ತಿದೆ. ನಾಳೆ ಕೇವಲ 99  ರೂಪಾಯಿಯಲ್ಲಿ ಈ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಈ ಕುರಿತು ಎರಡು ಚಿತ್ರ ತಂಡಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿವೆ.

ಸೆಪ್ಟೆಂಬರ್ ಐದರಂದು ತೆರೆ ಕಂಡಿದ್ದ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಎರಡು ವಾರಗಳನ್ನು ಪೂರೈಸಿದೆ. ನಾಳೆ ಯು ಎಸ್ ಎ ಆಸ್ಟ್ರೇಲಿಯಾ ಹಾಗೂ ಕೆನಡಾದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ಕಿರಣ್ ರಾಜ್ ಅಭಿನಯದ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಾನಿ’ ಚಿತ್ರ ಕೂಡ ಎಲ್ಲರ ಫೇವರೆಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ  ಧೂಳೆಬ್ಬಿಸಿದೆ. ಕಳೆದ ವಾರ ತೆರೆಕಂಡಿದ್ದ ಈ ಚಿತ್ರದ ಬಗ್ಗೆ ಪ್ರೇಕ್ಷಕ ಪ್ರಭುಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಕಿರಣ್ ರಾಜ್ ಅವರ ಅದ್ಭುತ ನಟನೆಗೆ ಫಿದಾ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular