HomeKarnatakaBIG NEWS: ಮುನಿರತ್ನ ಆಡಿಯೋ ಕೇಸ್: ಗುತ್ತಿಗೆದಾರ ಚಲುವರಾಜು ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ...

BIG NEWS: ಮುನಿರತ್ನ ಆಡಿಯೋ ಕೇಸ್: ಗುತ್ತಿಗೆದಾರ ಚಲುವರಾಜು ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಆಡಿಯೋ ಪ್ರಕರಣ, ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಬೆಂಗಳೂರಿನ ಭಾರತ್ ನಗರದಲ್ಲಿರುವ ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಲುವರಾಜು ಹಾಗೂ ಅವರ ಪತ್ನಿಯಿಂದ ಮಾಹಿತಿ ಪಡೆದರು.

ಶಾಸಕ ಮುನಿರತ್ನ ಕಳೆದ ಮೂರು ವರ್ಷಗಳಿಂದ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಕಮಿಷನ್ ಗಾಗಿ ಪೀಡಿಸಿದ್ದಾರೆ. ನನ್ನ ಹಾಗೂ ನನ್ನ ಪತ್ನಿಯನ್ನು ಹೀನಾಮಾನವಾಗಿ ಅವಮಾನಿಸಿದ್ದಾರೆ. ನನ್ನ ಪತ್ನಿ ಫೋಟೋ ಕಳುಹಿಸು ಎಂದು ಕಿರುಕುಳ ನೀಡಿದ್ದಾರೆ ಎಂದು ಚಲುವರಾಜು ಸಚಿವರ ಬಳಿ ಕಣ್ಣೀರಿಟ್ಟಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸರ್ಕಾರ ನಿಮ್ಮ ಜೊತೆಗಿದೆ ಎಂದು ದೈರ್ಯ ತುಂಬಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular