ಮೋವ್ (ಮಧ್ಯಪ್ರದೇಶ) : ಇಬ್ಬರು ಸೇನಾಧಿಕಾರಿಗಳು ಮತ್ತು ಅವರ ಮಹಿಳಾ ಸ್ನೇಹಿತರಿಗೆ ತಡರಾತ್ರಿ ಪಿಕ್ನಿಕ್ ಕ್ರೂರ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
ಹೌದು. ಮಂಗಳವಾರ ಮೋವ್-ಮಂಡ್ಲೇಶ್ವರ ರಸ್ತೆಯ ಜಾಮ್ ಗೇಟ್ ಬಳಿ ಈ ಗುಂಪಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ಒಬ್ಬ ಮಹಿಳೆಯನ್ನು ಗುಂಪು ಹಿಂಸಾತ್ಮಕವಾಗಿ ‘ಸಾಮೂಹಿಕ ಅತ್ಯಾಚಾರ’ ಮಾಡಿದೆ.
ಸಂತ್ರಸ್ತ ಅಧಿಕಾರಿಯೊಬ್ಬರ ದೂರಿನ ಮೇರೆಗೆ ಪೊಲೀಸರು ಎಂಟು ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ತನ್ನ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಉಲ್ಲೇಖಿಸಿ ಈ ನಿಟ್ಟಿನಲ್ಲಿ ಏನನ್ನೂ ಹೇಳಲು ನಿರಾಕರಿಸಿದ್ದಾರೆ ಎಂದು ಎಸ್ಪಿ (ಇಂದೋರ್ ಗ್ರಾಮೀಣ) ಹಿತಿಕಾ ವಾಸಲ್ ಹೇಳಿದ್ದಾರೆ. ಇಬ್ಬರು ಆರೋಪಿಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಘಟನೆ ನಡೆಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಎರಡನೇ ಅಧಿಕಾರಿ ತನ್ನ ಹಿರಿಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿತು, ಆದರೆ ಅಷ್ಟೊತ್ತಿಗಾಗಲೇ ದುಷ್ಕರ್ಮಿಗಳು ದಟ್ಟ ಕಾಡಿಗೆ ಪರಾರಿಯಾಗಿದ್ದರು” ಎಂದು ಹಿರೋರ್ ಹೇಳಿದರು.