HomeEntertainmentBIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಚಾರ್ಜ್ ಶೀಟ್ ನಲ್ಲಿ ನಟಿ ರಾಗಿಣಿ,...

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಚಾರ್ಜ್ ಶೀಟ್ ನಲ್ಲಿ ನಟಿ ರಾಗಿಣಿ, ಶುಭಾ ಪೂಂಜಾ ಹೆಸರು ಉಲ್ಲೇಖ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ನಟಿ ರಾಗಿಣಿ, ಶುಭಾ ಪೂಂಜಾ ಹೆಸರು ಉಲ್ಲೇಖಿಸಲಾಗಿದೆ.

ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಶುಭಾ ಪೂಂಜಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದನು ಎಂಬ ವಿಚಾರವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ರಾಗಿಣಿ ಹಾಗೂ ಶುಭಾ ಪೂಂಜಾ ಸೇರಿದಂತೆ ಹಲವು ನಟಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ 3,991 ಪುಟಗಳ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಸ್ವಾಮಿ ಅವರ ಖಾಸಗಿ ಭಾಗಗಳ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಸಹಿಸಲಾಗದೇ ಪವಿತ್ರಾ ಗೌಡ, ರೇಣುಕಸ್ವಾಮಿಯ ಸಂದೇಶಗಳನ್ನು ನಿಭಾಯಿಸುವಂತೆ ಪ್ರಕರಣದ ಇನ್ನೊಬ್ಬ ಆರೋಪಿ ಪವನ್ ಗೆ ಸೂಚಿಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.ರೇಣುಕಾಸ್ವಾಮಿಯನ್ನು ಪತ್ತೆಹಚ್ಚಲು, ಪವನ್ ಪವಿತ್ರಾ ಗೌಡ ಅವರ ಸೋಗಿನಲ್ಲಿ ಅವರೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದರು. ಆರೋಪಿ ಪವನ್ ಪವಿತ್ರಾ ಗೌಡ ಹೆಸರಿನಲ್ಲಿ ಚಾಟ್ ಮಾಡಿ ರೇಣುಕಾಸ್ವಾಮಿಯನ್ನು ಖೆಡ್ಡಾಗೆ ಬೀಳಿಸಿದ್ದಾನೆ.

ಚಾರ್ಜ್ ಶೀಟ್ನಲ್ಲಿ ದಾಖಲಿಸಿರುವಂತೆ ಪವಿತ್ರಾ-ರೇಣುಕಾಸ್ವಾಮಿ ನಡುವೆ ಇನ್ಸ್ಟಾಗ್ರಾಂನಲ್ಲಿ ಚಾಟಿಂಗ್ ನಡೆದಿದೆ.. ಹಾಯ್.. ಹಾಯ್ ಕಣೇ, ಗುಡ್ನೈಟ್ ಸ್ಪೀಟ್ ಗ್ರೀಮ್ಸ್ ಕಣೇ, ನೀನು ಏನ್ ಎಕ್ಸ್ ಪೆಕ್ಟ್ ಮಾಡ್ತೀಯಾ? ಹಾಯ್ ಕಣೇ..ಹಾಯ್, ಗುಡ್ನೈಟ್ ಸ್ವೀಟ್ ಗ್ರೀಮ್ಸ್ ಕಣೇ, ವಾವ್ ಸೂಪರ್ಬ್ ಬ್ಯೂಟಿ, ಹಾಯ್ ಕಣೇ..ಹಾಯ್, ಹಾಟ್ ಅಂಡ್ ಸೆಕ್ಸಿ ಫಿಗರ್ ಕಣೇ ನೀನು, ವಾವ್ ಸೂಪರ್ ಬ್ಯೂಟಿ ಹಾಟ್ ಅಂಡ್ ಸೆಕ್ಸಿ ಫಿಗರ್ ನೀನು, ನೀನು ಸಖತ್ ಆಗಿ ಇದಿಯಾ. ಮೆಸೇಜ್ ಮಾಡಿದ ಬಳಿಕ ಪವಿತ್ರಾ ಗೌಡ ಡ್ರಾಪ್ ಮಿ ಯುವರ್ ನಂಬರ್ (ನಿನ್ನ ನಂಬರ್ ಕಳುಹಿಸು) ಎಂದಿದ್ದಾಳೆ. ಇಷ್ಟೇ ಅಲ್ಲದೇ ಹಲವು ಅಸಹ್ಯಕರ ಮೆಸೇಜ್ ಗಳನ್ನು ರೇಣುಕಾಸ್ವಾಮಿ ಕಳುಹಿಸಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular