HomeKarnatakaವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟು ನಗ್ನ ವಿಡಿಯೋ ರೆಕಾರ್ಡ್ ಪ್ರಕರಣ: ಪೋಕ್ಸೋ ಕೇಸ್ ರದ್ದು ಮಾಡುವಂತೆ ಶಿಕ್ಷಕ...

ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟು ನಗ್ನ ವಿಡಿಯೋ ರೆಕಾರ್ಡ್ ಪ್ರಕರಣ: ಪೋಕ್ಸೋ ಕೇಸ್ ರದ್ದು ಮಾಡುವಂತೆ ಶಿಕ್ಷಕ ಸಲ್ಲಿಸಿದ್ದ ಅರ್ಜಿ ವಜಾ

ಕೋಲಾರ: ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಕಿರುಕುಳ, ಹಿಂಸೆ ನೀಡಿ, ನಗ್ನ ವಿಡಿಯೋ ರೆಕಾರ್ಡ್ ಮಾಡಿದ್ದ ಶಿಕ್ಷಕನಿಗೆ ಸಂಕಷ್ಟ ಎದುರಾಗಿದೆ. ಪೋಕ್ಸೋ ಕೇಸ್ ರದ್ದು ಮಾಡುವಂತೆ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ಕೋಲಾರದ ಮಾಲೂರು ತಾಲೂಕಿನ ಮೊರರಜಿ ವಸತಿ ಶಾಲೆಯ ಶಿಕ್ಷಕ ಮುನಿಯಪ್ಪ ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಆದರೆ ಹೈಕೋರ್ಟ್, ಆತನ ಅರ್ಜಿ ವಜಾಗೊಳಿಸಿದೆ.

ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಆರೋಪದಲ್ಲಿ ಶಿಕ್ಷಕನ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹೆಣ್ಣುಮಕ್ಕಳ ನಗ್ನ ವಿಡಿಯೋಗಳು ರೆಕಾರ್ಡ್ ಆಗಿದ್ದವು, ಆತನ 4 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ವಸತಿ ಶಾಲೆಯ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ ನೀಡಿ ನಗ್ನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ದುರುಳ ಶಿಕ್ಷಕ. ವಿಡಿಯೋ ಪತ್ತೆ ಬೆನ್ನಲ್ಲೇ ಶಿಕ್ಷಕನ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಅಲ್ಲಿ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular