HomeLatest NewsBREAKING NEWS: ಖ್ಯಾತ ಇನ್ ಸ್ಟಾಗ್ರಾಮ್ ಸ್ಟಾರ್ ಬೆಂಗಳೂರು ಪೊಲೀಸ್ ವಶಕ್ಕೆ

BREAKING NEWS: ಖ್ಯಾತ ಇನ್ ಸ್ಟಾಗ್ರಾಮ್ ಸ್ಟಾರ್ ಬೆಂಗಳೂರು ಪೊಲೀಸ್ ವಶಕ್ಕೆ

ಬೆಂಗಳೂರು: ಇನ್ ಸ್ಟಾ ಗ್ರಾಂ ಸ್ಟಾರ್ ಯೂನಿಸ್ ನನ್ನು ಬೆಂಗಳೂರು ಪೊಲಿಸರು ವಶಕ್ಕೆ ಪಡೆದಿದ್ದಾರೆ.

ಜನರ ಗುಂಪು ಸೇರಿಸಿ ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆಯಲ್ಲಿ ಇನ್ ಸ್ಟಾಗ್ರಾಂ ಸ್ಟಾರ್ ಯೂನಿಸ್ ನನ್ನು ಪೊಲೀಸರು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಇನ್ ಸ್ಟಾಗ್ರಾಂ ಸ್ಟಾರ್ ಯೂನಿಸ್ ಸರ್ ಪ್ರೈಸ್ ಗಿಫ್ಟ್ ಗಳನ್ನು ಕೊಡುತ್ತಿದ್ದ. ಬೇರೆ ಬೇರೆ ದೇಶಗಳಿಗೆ ತೆರಳಿ ವಿಡಿಯೋ ಮಾಡಿ ಸರಿಯಾದ ಉತ್ತರಗಳನ್ನು ಕೊಟ್ಟವರಿಗೆ ಸರ್ ಪ್ರೈಸ್ ಗಿಫ್ಟ್ ಆಗಿ ಐಫೋನ್ ಸೇರಿ ವಿವಿಧ ವಸ್ತುಗಳನ್ನು ನೀಡುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀರೇತಿ ಬೆಂಗಳೂರಿನ ಎಂ.ಜಿ.ರಸ್ತೆಗೂ ಆಗಮಿಸಿದ್ದ ಯೂನಿಸ್. ಈ ವೇಳೆ ಸುದ್ದಿ ತಿಳಿದು ಆತನನ್ನು ನೋಡಲು ಬಂದಿದ್ದ ಜನರು ಎಂ.ಜಿ.ರಸ್ತೆಯಲ್ಲಿ ಜಮಾವಣೆಗೊಂಡಿದ್ದರು. ನಡುರಸ್ತೆಯಲ್ಲಿ ಜನರ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟಕ್ಕೂ ಅಡ್ಡಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯೂನಿಸ್ ನನ್ನು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular