alex Certify ‘ಮೊಬೈಲ್ ರೀಚಾರ್ಜ್ ಮಾಡ್ಬೇಕಂದ್ರೆ ಐ ಲವ್ ಯು ಹೇಳು’; ಬೇಡಿಕೆಯಿಟ್ಟವನಿಗೆ ವಿದ್ಯಾರ್ಥಿನಿಯರಿಂದ ಥಳಿತ | Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊಬೈಲ್ ರೀಚಾರ್ಜ್ ಮಾಡ್ಬೇಕಂದ್ರೆ ಐ ಲವ್ ಯು ಹೇಳು’; ಬೇಡಿಕೆಯಿಟ್ಟವನಿಗೆ ವಿದ್ಯಾರ್ಥಿನಿಯರಿಂದ ಥಳಿತ | Video

ದೇಶಾದ್ಯಂತ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಲು ಬಂದ ಕಾಲೇಜು ಹುಡುಗಿಯರಿಗೆ ́ಐ ಲವ್ ಯು́ ಎಂದು ಹೇಳುವಂತೆ ಬೇಡಿಕೆ ಇಟ್ಟ ವ್ಯಾಪಾರಿಯನ್ನು ಥಳಿಸಲಾಗಿದೆ.

ರಾಜಸ್ಥಾನದ ಕುಚಮನ್ ಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಫೋನ್ ರೀಚಾರ್ಜ್ ಮಾಡಲು ಅಂಗಡಿಯೊಂದಕ್ಕೆ ಹೋದಾಗ ಈ ಘಟನೆ ನಡೆದಿದೆ. ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಬೇಕಂದ್ರೆ ಮೊದಲು “ಐ ಲವ್ ಯೂ” ಎಂದು ಹೇಳು ಆಮೇಲೆ ರೀಚಾರ್ಜ್ ಮಾಡುತ್ತೇನೆಂದು ಅಂಗಡಿಯವನು ಹೇಳಿದ್ದಾನೆ.

ಇಂತಹ ವಿಲಕ್ಷಣ ಬೇಡಿಕೆಯನ್ನು ಎದುರಿಸಿದ ವಿದ್ಯಾರ್ಥಿನಿ ವಿಚಾರವನ್ನು ತನ್ನ ಗೆಳತಿಯರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಕಾಲೇಜು ವಿದ್ಯಾರ್ಥಿನಿಯರು ಅಂಗಡಿಯವನೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ. ಘರ್ಷಣೆಯ ವಿಡಿಯೋ ವೈರಲ್ ಆಗಿದ್ದು, ಹುಡುಗಿಯರು ಅಂಗಡಿಯವನನ್ನು ಥಳಿಸಿ ಆ ಪ್ರದೇಶದಲ್ಲಿ ಮೆರವಣಿಗೆ ಮಾಡಿದ್ದಾರೆ.

ಸಿಕರ್ ರೋಡ್ ಬಸ್ ನಿಲ್ದಾಣದ ಬಳಿ ಇರುವ ಇ-ಮಿತ್ರ ಕೇಂದ್ರವನ್ನು ನಿರ್ವಹಿಸುತ್ತಿರುವ ಅಂಗಡಿಯವನು ತನ್ನ ಅಂಗಡಿಯನ್ನು ಮುಚ್ಚಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು, ಆದರೆ ಸ್ಥಳೀಯರು ಮತ್ತು ಹುಡುಗಿಯರು ಅವನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಗಡಿಯವರನ್ನು ವಶಕ್ಕೆ ಪಡೆದರು.

— Priya singh (@priyarajputlive) September 1, 2024

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...