HomeKarnatakaBREAKING : 'ನಿಮ್ಮಂತಹ ಅಭಿಮಾನಿಗಳಿಂದ ನಟ ದರ್ಶನ್ ಗೆ ಕೆಟ್ಟ ಹೆಸರು' : ಬೆಂಗಳೂರಲ್ಲಿ...

BREAKING : ‘ನಿಮ್ಮಂತಹ ಅಭಿಮಾನಿಗಳಿಂದ ನಟ ದರ್ಶನ್ ಗೆ ಕೆಟ್ಟ ಹೆಸರು’ : ಬೆಂಗಳೂರಲ್ಲಿ ಫ್ಯಾನ್ಸ್ ಗೆ ಪೊಲೀಸರ ಕ್ಲಾಸ್..!

ಬೆಂಗಳೂರು : ನಿಮ್ಮಂತಹ ಅಭಿಮಾನಿಗಳಿಂದ ನಟ ದರ್ಶನ್ ಗೆ ಕೆಟ್ಟ ಹೆಸರು ಬಂದಿದೆ ಎಂದು ಅಭಿಮಾನಿಗಳಿಗೆ ಪೊಲೀಸರು ಸಖತ್ ಕ್ಲಾಸ್ ತೆಗೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಪ್ರಸನ್ನ ಥಿಯೇಟರ್ ಬಳಿ ಈ ಘಟನೆ ನಡೆದಿದೆ. ಇಂದು ನಟ ದರ್ಶನ್ ಅಭಿನಯದ ಕರಿಯ ಚಿತ್ರ ರಿ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಸನ್ನ ಥಿಯೇಟರ್ ವೇಳೆ ಗಲಾಟೆ ಮಾಡಿದ ಅಭಿಮಾನಿಗಳಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬೇರೆಯವರ ಬಗ್ಗೆ ಮಾತನಾಡುವುದು, ಘೋಷಣೆ ಕೂಗುವುದು, . ಗಲಾಟೆ ಮಾಡಬೇಡಿ. ಅಭಿಮಾನಿಯಾಗಿ ನೀವು ಸುಮ್ಮನಿರಬೇಕು ಎಂದು ಅಭಿಮಾನಿಗಳಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಪೊಲೀಸರ ಸೂಚನೆ ಬಳಿಕ ಫ್ಯಾನ್ಸ್ ಗಪ್ ಚುಪ್ ಆಗಿದ್ದಾರೆ.

2003 ಜನವರಿ ಮೂರರಂದು ತೆರೆಕಂಡಿದ್ದ ಪ್ರೇಮ್ ನಿರ್ದೇಶನದ ಕರಿಯ ಇಂದು ರಿ ರಿಲೀಸ್ ಆಗಿದೆ. ರಾಜ್ಯದ ಹಲವು ಕಡೆ ಈ ಸಿನಿಮಾ ಮರು ಬಿಡುಗಡೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಾರು 700ಕ್ಕು ಹೆಚ್ಚು ದಿನಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಸ್ಯಾಂಡಲ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ರೌಡಿಸಂ ಹಾಗೂ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ಅಭಿನಯಶ್ರೀ ಅಭಿನಯಿಸಿದ್ದು, ಮೈಕೋ ನಾಗರಾಜ್, ಉಮೇಶ್ ಪುಂಗ, ನಂದಕಿಶೋರ್, ದಶಾವರ ಚಂದ್ರು, ನಂದೀಶ್, ಬೀ ಜಯಶ್ರೀ, ಫೈವ್ ಸ್ಟಾರ್ ಗಣೇಶ್ ಹಾಗೂ ಸುರೇಶ್ ಶರ್ಮಾ ಬಣ್ಣ ಹಚ್ಚಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದು, ಸಂತೋಷ್ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜು ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular