HomeKarnatakaBREAKING : ರಾಜ್ಯದಲ್ಲಿ ಗೋಬಿ, ಕಬಾಬ್ ಬೆನ್ನಲ್ಲೇ ಕೃತಕ ಬಣ್ಣ ಬಳಸಿದ ‘ಕೇಕ್’ ನಿಷೇಧ..!

BREAKING : ರಾಜ್ಯದಲ್ಲಿ ಗೋಬಿ, ಕಬಾಬ್ ಬೆನ್ನಲ್ಲೇ ಕೃತಕ ಬಣ್ಣ ಬಳಸಿದ ‘ಕೇಕ್’ ನಿಷೇಧ..!

ಬೆಂಗಳೂರು : ಗೋಬಿ ಮಂಚೂರಿ, ಕಬಾಬ್ ಬಳಿಕ ಕೇಕ್ ನಲ್ಲಿ ಕೃತಕ ಬಣ್ಣ ಬಳಕೆಗೆ ನಿರ್ಬಂಧ ಹೇರಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಹೌದು, ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ಇದನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಇದೀಗ ಕೇಕ್ ನ ಸರದಿ.

ಕೇಕ್ ನಲ್ಲಿ ಬಳಸುವ ಕೃತಕ ಬಣ್ಣವನ್ನು ನಿರ್ಬಂಧಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಶೀಘ್ರವೇ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ. ಕೇಕ್ ನಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular