HomeKarnatakaBIGG NEWS : ರಾಜ್ಯದಲ್ಲಿ ಭುಗಿಲೆದ್ದ ಮತ್ತೊಂದು 'ವಿವಾದ' : 'ಶಿಕ್ಷಣ ಇಲಾಖೆ'ಯ ಪ್ರಶಸ್ತಿ ಪತ್ರದಲ್ಲಿ...

BIGG NEWS : ರಾಜ್ಯದಲ್ಲಿ ಭುಗಿಲೆದ್ದ ಮತ್ತೊಂದು ‘ವಿವಾದ’ : ‘ಶಿಕ್ಷಣ ಇಲಾಖೆ’ಯ ಪ್ರಶಸ್ತಿ ಪತ್ರದಲ್ಲಿ `ಯೇಸು ಕ್ರಿಸ್ತ’ ಹಾಗೂ `ಮೇರಿ’ ಫೋಟೋ!

ಚಾಮರಾಜನಗರ : ಶಿಕ್ಷಣ ಇಲಾಖೆಯ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿತರಿಸಲಾದ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಈ ವಿಚಾರ ವಿವಾದಕ್ಕೆ ಕಾರಣವಾಗಿದೆ. ಪ್ರಶಸ್ತಿ ಪತ್ರದ ಎಡಭಾಗದಲ್ಲಿ ಹಾಗೂ ಬಲಭಾಗದಲ್ಲಿ ಕ್ರೈಸ್ತ ಧರ್ಮದ ಆರಾಧಕರ ಚಿತ್ರಗಳನ್ನು ಮುದ್ರಿಸಲಾಗಿದೆ.

ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಗಳ ಮುಖ್ಯದ್ವಾರದಲ್ಲಿ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ” ಎಂಬ ಸಾಲು ಬರೆಯುವುದು ಕೋಮುವಾದ ಶಾಲಾ ಕಾಲೇಜುಗಳ ಆವರಣದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಕೋಮುವಾದ ಆದರೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗು ಮೇರಿ ಫೋಟೋ ಹಾಕುವುದು ಮಾತ್ರ ಜಾತ್ಯತೀತ! ಇದು ಕಾಂಗ್ರೆಸ್ ಸರ್ಕಾರದ ನಿಜವಾದ ಜಾತ್ಯತೀತತೆ. ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular