HomeEntertainment'ಕಣಂಜಾರು' ಚಿತ್ರದ 'ಪ್ರೇಮ ಶೃಂಗಾರ' ಹಾಡು ರಿಲೀಸ್

‘ಕಣಂಜಾರು’ ಚಿತ್ರದ ‘ಪ್ರೇಮ ಶೃಂಗಾರ’ ಹಾಡು ರಿಲೀಸ್

ಆರ್ ಬಾಲಚಂದ್ರ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಣಂಜಾರು’ ಚಿತ್ರದ ‘ಪ್ರೇಮ ಶೃಂಗಾರ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡನ್ನು ಆರ್. ಪಿ ಫಿಲಂ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅನುರಾಧ ಭಟ್ ಹಾಗೂ ಯಾಜಿನ್ ನಿಜಾರ್ ಈ ಹಾಡಿಗೆ ಧ್ವನಿಯಾಗಿದ್ದು, ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಆರ್ ಪಿ ಫಿಲಂಸ್ ಬ್ಯಾನರ್ ನಲ್ಲಿ ಬಾಲಚಂದ್ರ ಅವರೇ ನಿರ್ಮಾಣ ಮಾಡಿದ್ದು, ಆರ್ ಬಾಲಚಂದ್ರ ಸೇರಿದಂತೆ ಅಪೂರ್ವ, ಮೇಘ, ಶರ್ಮಿತ ಗೌಡ, ಪಿ ಎಸ್ ಶ್ರೀಧರ್ ಹಾಗೂ ರಾಮಕೃಷ್ಣ ಬಣ್ಣ ಹಚ್ಚಿದ್ದಾರೆ. ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗಡೆ ಹಾಗೂ ರವಿವರ್ಮ ಛಾಯಾಗ್ರಹಣ, ಕುಂಗ್ಫು ಚಂದ್ರು ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular