HomeKarnatakaBREAKING : ನಟ ದರ್ಶನ್ ಗೆ ವಿಡಿಯೋ ಕಾಲ್ ಮಾಡಿದ್ದ ರೌಡಿಶೀಟರ್ 'ಸತ್ಯ' ಪೊಲೀಸ್ ವಶಕ್ಕೆ..!

BREAKING : ನಟ ದರ್ಶನ್ ಗೆ ವಿಡಿಯೋ ಕಾಲ್ ಮಾಡಿದ್ದ ರೌಡಿಶೀಟರ್ ‘ಸತ್ಯ’ ಪೊಲೀಸ್ ವಶಕ್ಕೆ..!

ಬೆಂಗಳೂರು : ನಟ ದರ್ಶನ್ ಜೊತೆಗಿನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರೌಡಿ ಶೀಟರ್ ಜನಾರ್ಧನ್ ಪುತ್ರ ಸತ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ರೌಡಿ ಶೀಟರ್ ಜನಾರ್ಧನ್ ಪುತ್ರ ಸತ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜೈಲಿನಲ್ಲಿದ್ದ ರೌಡಿ ಶೀಟರ್ ಧರ್ಮ ಜೊತೆ ವಿಡಿಯೋ ಕಾಲ್ ಮಾಡುವಾಗ ಸತ್ಯ ನಟ ದರ್ಶನ್ ಜೊತೆ ಕೂಡ ಮಾತನಾಡಿದ್ದನು. ಬ್ಯಾಡರಹಳ್ಳಿ ರೌಡಿಶೀಟರ್ ಜನಾರ್ಧನ ಪುತ್ರ ಈ ಸತ್ಯ ದರ್ಶನ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದನು. ಈ ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನಲಾಗಿದೆ. ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದರೂ ಜೈಲಿನಲ್ಲಿ ದರ್ಶನ್ ಆರಾಮವಾಗಿ ಸಕಲ ಸೌಲಭ್ಯಗಳೊಂದಿಗೆ ಕಾಲಕಳೆಯುತ್ತಿರುವಂತಿದೆ. ಜೈಲಿನಲ್ಲಿ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್ ಫೋಟೊ ವೈರಲ್ ಆಗಿದ್ದು, ಸಾಕಷ್ಟು ಅಚ್ಚರಿ, ಅನುಮಾನಗಳಿಗೆ ಕಾರಣವಾಗಿದೆ. ಒಂದು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ನಾಲ್ಕು ಜನರೊಂದಿಗೆ ಆರಾಮವಾಗಿ ಕುಳಿತು ನಗುತ್ತಾ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular