HomeIndiaಹೈದರಾಬಾದ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ ; 17 ವಿದೇಶಿ ಮಹಿಳೆಯರು ಪೊಲೀಸ್ ವಶಕ್ಕೆ

ಹೈದರಾಬಾದ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ ; 17 ವಿದೇಶಿ ಮಹಿಳೆಯರು ಪೊಲೀಸ್ ವಶಕ್ಕೆ

ಹೈದರಾಬಾದ್ ನಲ್ಲಿ ಪೊಲೀಸರು ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ವಿದೇಶಿ ಹುಡುಗಿಯರೊಂದಿಗೆ ಆನ್ಲೈನ್ ವೆಬ್ಸೈಟ್ ಮೂಲಕ ಆಯೋಜಿಸಲಾದ ಈ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಗಚಿಬೌಲಿ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಪೊಲೀಸರು ಕೊಂಡಾಪುರದ ಮನೆಯ ಮೇಲೆ ದಾಳಿ ನಡೆಸಿದರು.

17 ವಿದೇಶಿ ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇವರಲ್ಲಿ 14 ಮಂದಿ ಕೀನ್ಯಾದವರು, ಉಗಾಂಡಾ ಮತ್ತು ತಾಂಜೇನಿಯಾದ ಯುವತಿಯರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇಶ್ಯಾವಾಟಿಕೆ ದಂಧೆಯ ಮ್ಯಾನೇಜರ್ ಶಿವಕುಮಾರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಯುವತಿಯರ ಫೋಟೋಗಳನ್ನು ಲೋಕಾಂಟೋ ಎಂಬ ವೆಬ್ಸೈಟ್ನಲ್ಲಿ ಹಾಕಿ ವೇಶ್ಯಾವಾಟಿಕೆಗೆ ಜನರನ್ನು ಆಹ್ವಾನಿಸುತ್ತಿದ್ದರು.ಬಂಧಿತರಿಂದ 4 ಮೊಬೈಲ್ ಫೋನ್, 25 ಎಚ್ಐವಿ ಕಿಟ್, ಹುಕ್ಕಾ ಮಡಕೆ ಹಾಗೂ 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆ ದಂಧೆಗಳ ವಿರುದ್ಧ ಜಾಗರೂಕರಾಗಿರಲು ಮತ್ತು ಅಂತಹ ವಿಷಯದ ಬಗ್ಗೆ ತಿಳಿದರೆ ತಿಳಿಸಲು ನಗರ ನಿವಾಸಿಗಳಿಗೆ ಸೂಚಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular