HomeKarnatakaVideo: ರವಿಶಂಕರ್‌ ಗುರೂಜಿಯವರಿಗೆ ಈ ಪ್ರಶ್ನೆ ಕೇಳಿದ ಸುನಿಲ್ ಗ್ರೋವರ್; ಕಸಿವಿಸಿಗೊಳಗಾದ ಕಪಿಲ್‌ ಶರ್ಮಾ...!

Video: ರವಿಶಂಕರ್‌ ಗುರೂಜಿಯವರಿಗೆ ಈ ಪ್ರಶ್ನೆ ಕೇಳಿದ ಸುನಿಲ್ ಗ್ರೋವರ್; ಕಸಿವಿಸಿಗೊಳಗಾದ ಕಪಿಲ್‌ ಶರ್ಮಾ…!

ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇತ್ತೀಚೆಗೆ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಆಶ್ರಮಕ್ಕೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದರು. ಇಬ್ಬರೂ ರವಿಶಂಕರ್‌ ಗುರೂಜಿ ಜೊತೆ ಸಂವಾದ ನಡೆಸಿದರು. ಕಪಿಲ್‌ ಶರ್ಮಾ ಮತ್ತು ಸುನಿಲ್‌ ಗ್ರೋವರ್‌ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೋಪ ಮತ್ತು ಸಂಘರ್ಷಕ್ಕೆ ಸಂಬಂಧಿಸಿದಂತೆ ಮೂವರ ಚರ್ಚೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಸುನಿಲ್‌ ಗ್ರೋವರ್‌, ಸ್ನೇಹಿತರಿಬ್ಬರು ಕೋಪಗೊಂಡಾಗ ಏನು ಮಾಡ್ಬೇಕು ಎನ್ನುವ ಬಗ್ಗೆ ರವಿಶಂಕರ್‌ ಗುರೂಜಿ ಅವರನ್ನು ಕೇಳಿದ್ದಾರೆ. ಅದಕ್ಕೆ ರವಿಶಂಕರ್‌ ಗುರೂಜಿ ಉತ್ತರ ನೀಡಿದ್ದಾರೆ. ಜಗಳ, ಪ್ರೀತಿಯ ಒಂದು ಭಾಗ. ಒಬ್ಬರನ್ನು ಪ್ರೀತಿಸಿ, ಇನ್ನೊಬ್ಬರ ಜೊತೆ ಜಗಳ ಮಾಡಲು ಸಾಧ್ಯವಿಲ್ಲ. ಪ್ರೀತಿ ಮತ್ತು ಜಗಳ ಎರಡಕ್ಕೂ ನೀವು ಒಟ್ಟಿಗೆ ಇರಬೇಕು ಎಂದು ರವಿಶಂಕರ್‌ ಗುರೂಜಿ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ, 2017 ರ ಅಕ್ಟೋಬರ್‌ನಲ್ಲಿ  ವಿಮಾನದಲ್ಲಿ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ನಡುವೆ ಜಗಳ ನಡೆದಿತ್ತು. ಮದ್ಯದ ಅಮಲಿನಲ್ಲಿ ಕಪಿಲ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಯ ನಂತರ ಸುನಿಲ್ ತಮ್ಮ ಪ್ರಸಿದ್ಧ ಕಾಮಿಕ್ ಶೋ ದಿ ಕಪಿಲ್ ಶರ್ಮಾ ಶೋ ಅನ್ನು ತೊರೆದಿದ್ದರು. ಅದಾದ್ಮೇಲೆ ಅವರಿಬ್ಬರು ಅನೇಕ ವರ್ಷ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular