HomeIndiaBIG NEWS: ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನ ದಾಲ್ ನಲ್ಲಿ ಸಿಕ್ತು ಜೀವಂತ ಜಿರಳೆ...!

BIG NEWS: ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನ ದಾಲ್ ನಲ್ಲಿ ಸಿಕ್ತು ಜೀವಂತ ಜಿರಳೆ…!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನೀಡಲಾದ ದಾಲ್‌ ನಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಶಿರಡಿಯಿಂದ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರೊಬ್ಬರು ದಾಲ್‌ ಆರ್ಡರ್‌ ಮಾಡಿದ್ದಾರೆ. ಅದ್ರಲ್ಲಿ ಅವರಿಗೆ ಜೀವಂತ ಜಿರಳೆ ಕಂಡಿದೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ದೂರು ನೀಡಿದ್ದಾರೆ. ಬರಿ ದಾಲ್‌ ನಲ್ಲಿ ಮಾತ್ರವಲ್ಲ ಇನ್ನೂ ಅನೇಕ ಪದಾರ್ಥಗಳಲ್ಲಿ ಜಿರಳೆ ಸೇರಿದಂತೆ ಹುಳು ಬಿದ್ದಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಪ್ರಯಾಣಿಕರು ದಾಲ್‌, ಮೊಸರು ಹಾಗೂ ಸಂಪೂರ್ಣ ಆಹಾರದ ಕ್ವಾಲಿಟಿಯನ್ನು ಪ್ರಶ್ನಿಸಿದ್ದಾರೆ. ಪ್ರಯಾಣಿಕರು ಈ ಬಗ್ಗೆ ದೂರು ನೀಡಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ಐ ಆರ್‌ ಸಿ ಟಿ ಸಿ ಮ್ಯಾನೇಜರ್‌ ನರೇಂದ್ರ ಮಿಶ್ರಾ ಹಾಗೂ ಅಶೋಕ್‌ ಸಿಂಗ್‌ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular